ಗ್ರಾಮಸ್ಥರ ವಿರೋಧದ ನಡುವೆಯೂ ಮರಳುಗಾರಿಕೆ ಸಲ್ಲದು

shasaka bheti
ನಾಗರಮಠ ಹಾಗೂ ಹೊಸಾಳ ಗ್ರಾಮದ ವೆಂಟೆಂಡ್ ಡ್ಯಾಂ ಬಳಿ ಮರಳುಗಾರಿಕೆ ನಡೆಸುವ ಸ್ಥಳಕ್ಕೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಭೇಟಿ ನೀಡಿ ಪರಿಶೀಲಿಸಿದರು.
Published on

ಕೋಟ: ಬಾರಕೂರು ಗ್ರಾ.ಪಂ. ಹಾಗೂ ಸಾಲಿಗ್ರಾಮ ಪ.ಪಂ. ವ್ಯಾಪ್ತಿಯ ನಾಗರಮಠ ಹಾಗೂ ಹೊಸಾಳ ಗ್ರಾಮದ ವೆಂಟೆಂಡ್ ಡ್ಯಾಮ್ ಬಳಿ ಮರಳುಗಾರಿಕೆಗೆ ಸ್ಥಳೀಯರಿಂದ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಗಣಿ ಇಲಾಖೆ ಗುರುತುಪಡಿಸಿರುವ ಸ್ಥಳ ಮರಳುಗಾರಿಕೆಗೆ ಯೋಗ್ಯವಲ್ಲ ಈಗಾಗಲೇ ಕಿಂಡಿ ಅಣೆಕಟ್ಟು ಭಾಗದಲ್ಲಿ ಸಾಕಷ್ಟು ಕೃಷಿಭೂಮಿ ಕುಸಿದು ಹಾನಿಗೊಂಡಿದೆ ಎಂದು ಶಾಸಕರಿಗೆ ಮನವರಿಕೆ ಮಾಡಿದ ಗ್ರಾಮಸ್ಥರು, ಮರಳುಗಾರಿಕೆಯ ಸ್ಟಾಕ್ ಯಾರ್ಡ್‌ಗೆ ಕೃಷಿ ಭೂಮಿ ಬಳಕೆ ಮಾಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

ಮಾಹಿತಿ ಪಡೆದ ಶಾಸಕರು ಸ್ಥಳದಲ್ಲೇ ದೂರವಾಣಿ ಮೂಲಕ ಸಂಬಂಧಪಟ್ಟ ಇಲಾಖಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು, ಗ್ರಾಮಸ್ಥರ ವಿರೋಧವಿದ್ದಲ್ಲಿ ಮರಳುಗಾರಿಕೆ ನಡೆಸಬಾರದೆಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು. ಅಲ್ಲದೆ ಜಿಲ್ಲಾಧಿಕಾರಿಗಳಿಗೆ ಸ್ಥಳ ಪರಿಶೀಲನೆ ನಡೆಸಲು ಸೂಚಿಸಿ, ಗ್ರಾಮಸ್ಥರನ್ನು ವಿಶ್ವಾಸಕ್ಕೆ ಪಡೆದು ಮರಳುಗಾರಿಕೆ ನಡೆಸುವ ಸ್ಥಳಗಳ ಗುರುತು ಮಾಡಲು ಇಲಾಖಾಧಿಕಾರಿಗಳಿಗೆ ಸೂಚನೆ ನೀಡಲು ತಿಳಿಸಿದರು.

ಬಾರಕೂರು ಗ್ರಾ.ಪಂ. ಸದಸ್ಯ ಪ್ರವೀಣ್ ನಾಗರಮಠ, ವಡ್ಡರ್ಸೆ ಗ್ರಾ.ಪಂ. ಸದಸ್ಯ ಕುಶಲ ಶೆಟ್ಟಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

shasaka bheti

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net