ಗೃಹಲಕ್ಷ್ಮೀ ಹಣದಿಂದ ಯುಗಾದಿ ದಿನವೇ ಫ್ರಿಡ್ಜ್​ ಖರೀದಿಸಿದ ಮಹಿಳೆ

gruhalakshmi Fridge
Published on

ಹಾವೇರಿ: ಕಳೆದ ವರ್ಷ ನಡೆದ ರಾಜ್ಯ ವಿಧಾನಸಭೆ ಚುನಾವಣೆ ಸಮಯದಲ್ಲಿ ರಾಜ್ಯ ಕಾಂಗ್ರೆಸ್​ ಘೋಷಿಸಿದ್ದ ಐದು ಗ್ಯಾರಂಟಿಗಳನ್ನು ಘೋಷಿಸಿತ್ತು. ಅದರಂತೆ ಪ್ರತಿ ಮನೆ ಒಡತಿಗೆ 2000 ರೂಪಾಯಿ ನೀಡುವ ಗೃಹಲಕ್ಷ್ಮೀ ಯೋಜನೆ ಸಹ ಒಂದಾಗಿದ್ದು, ಇದರಿಂದ ಬರುವ ಹಣದಿಂದ ಬಹಳಷ್ಟು ಕುಟುಂಬಗಳಿಗೆ ಅನುಕೂಲವಾಗಿದೆ. ಅದರಂತೆ ಇದೀಗ ಗ್ಯಾರಂಟಿ ಯೋಜನೆಯಿಂದ ಬಡವರ ಚಿಕ್ಕಪುಟ್ಟ ಕನಸುಗಳು ನನಸಾಗಿವೆ ಎಂಬುದಕ್ಕೆ ಇಲ್ಲೊಂದು ಘಟನೆ ಸಾಕ್ಷಿಯಾಗಿದೆ.

ಗ್ಯಾರಂಟಿ ಯೋಜನೆಯಿಂದ ಬಂದ ಹಣವನ್ನು ಕೂಡಿಟ್ಟು ಮಹಿಳೆಯಿಬ್ಬರು ತಮ್ಮ ಮನೆಗೆ ಹೊಸ ಫ್ರಿಡ್ಜ್​ ತಂದಿದ್ದಾರೆ. ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲ್ಲೂಕಿನಲ್ಲಿ ಈ ಅಪರೂಪದ ಘಟನೆ ನಡೆದಿದ್ದು, ಎಲ್ಲರ ಹುಬ್ಬೇರುವಂತೆ ಮಾಡಿದೆ.

ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲ್ಲೂಕಿನ ನಿವಾಸಿಯಾದ ಲತಾ ಎಂಬ ಮಹಿಳೆಯೂ ಪ್ರತಿ ತಿಂಗಳು ತಮಗೆ ಬಂದ ಗೃಹಲಕ್ಷ್ಮೀ ಯೋಜನೆಯ ಹಣದಿಂದ ಯುಗಾದಿ ಹಬ್ಬಕ್ಕೆ ಹೊಸ ಫ್ರಿಜ್​ವೊಂದನ್ನು ಖರೀದಿ ಮಾಡಿದ್ದಾರೆ. ಹೌದು, ಬರೊಬ್ಬರಿ 17,500 ರೂಪಾಯಿ ಕೊಟ್ಟು ಫ್ರಿಜ್ ಖರೀದಿಸುವ ಮೂಲಕ ಯುಗಾದಿ ಹಬ್ಬಕ್ಕೆ ಹೊಸ ವಸ್ತುವನ್ನ ಮನೆಗೆ ತಂದಿದ್ದಾರೆ. ಹಬ್ಬದಂದು ಮನೆಗೆ ಬಂದ ಫ್ರಿಜ್ಗೆ ಲತಾ ಕುಟುಂಬ ಸದಸ್ಯರು ಪೂಜೆ ಸಲ್ಲಿಸಿ, ಸಂತಸ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net