ಬೆಂಗಳೂರಿನಲ್ಲಿ ಮತ್ತೆ ಕಾಮುಕರ ಅಟ್ಟಹಾಸ; ಮನೆಗೆ ಹೋಗಲು ಬಸ್ ಹತ್ತಿದ ಮಹಿಳೆ ಮೇಲೆ ಅತ್ಯಾಚಾರ

rape case
Published on

ಬೆಂಗಳೂರು: ಇತ್ತೀಚೆಗೆ ಲೈಂಗಿಕ ಕಿರುಕುಳ, ಅತ್ಯಾಚಾರದಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದು ಈಗ ನಾಗರಭಾವಿಯ ಬಳಿ ನಡೆದ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ.

ಸಂತ್ರಸ್ತ ಮಹಿಳೆ, ನಿನ್ನೆ (ಮಂಗಳವಾರ) ಸಂಜೆ ಸುಮಾರು 5.30ರ ಹೊತ್ತಿಗೆ ನಾಯಂಡಹಳ್ಳಿ ಜಂಕ್ಷನ್ ಬಳಿ ಬಸ್ ಹತ್ತಿದ್ದರು. ಬಸ್​ನಲ್ಲಿ ಯಾರೂ ಇರಲಿಲ್ಲ. ಆದರೆ ಚಾಲಕ ಪರಿಚಿತ ಆಗಿದ್ದ ಕಾರಣ ಮಹಿಳೆ ಬಸ್​ ಹತ್ತಿದ್ದರು. ಈ ವೇಳೆ ಬಸ್ಅನ್ನು ನಾಗರಭಾವಿ ಸರ್ವೀಸ್ ರಸ್ತೆಗೆ ಕಿರಾತಕ ತೆಗೆದುಕೊಂಡು ಹೋಗಿದ್ದಾನೆ. ಕೈಲಾಸಗಿರಿ ಬಳಿ ಇರುವ ಮಲೆ ಮಹದೇಶ್ವರ ದೇವಸ್ಥಾನದ ಬಳಿ ಬಸ್​ ನಿಲ್ಲಿಸಿ ಮಹಿಳೆ ಮೇಲೆ ಅತ್ಯಾಚಾರ ಮಾಡಿ ಎಸ್ಕೇಪ್ ಆಗಿದ್ದಾನೆ. ಈ ವೇಳೆ ಸಂತ್ರಸ್ತ ಮಹಿಳೆ ಬಸ್ ಪೋಟೋ ತೆಗೆದುಕೊಂಡಿದ್ದಾರೆ.

ಇದಾದ ಬಳಿಕ ಆಘಾತಗೊಂಡ ಮಹಿಳೆ ತನ್ನ ಮಗನಿಗೆ ಘಟನೆಯ ಬಗ್ಗೆ ತಿಳಿಸಿದ್ದರು. ಈ ಘಟನೆಯ ನಂತರ ಸಂತ್ರಸ್ತೆ ಮಗ ಚಾಲಕನನ್ನು ಹುಡುಕಿಕೊಂಡು ಹೋಗಿ ಜಗಳವಾಡಿದ್ದಾನೆ. ಈ ಮಾಹಿತಿಯನ್ನು ಯಾರೋ ಚಂದ್ರಾ ಲೇಔಟ್​ ಪೊಲೀಸರಿಗೆ ಮುಟ್ಟಿಸಿದ್ದು ಇದರಿಂದ ಘಟನೆ ಬೆಳಕಿಗೆ ಬಂದಿದೆ.

ಇದಾದ ಮೇಲೆ ಸಂತ್ರಸ್ತೆ ಚಂದ್ರಾ ಲೇಔಟ್​ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net