ಪತಿಯ ಲಾಡ್ಜ್​ನಲ್ಲೇ ಪತ್ನಿಯ ಆತ್ಮಹತ್ಯೆ; ಮಗಳ ಆತ್ಮಹತ್ಯೆಯಿಂದ ಮನನೊಂದು ತಾಯಿಯೂ ಸಾವಿಗೆ ಶರಣು...

death
ಸಾಂದರ್ಭಿಕ ಚಿತ್ರ
Published on

ಹುಬ್ಬಳ್ಳಿ: ಇಂಜಿನಿಯರ್ ಮಹಿಳೆಯೊಬ್ಬರು ತನ್ನ ಪತಿ ನಡೆಸುತ್ತಿದ್ದ ಲಾಡ್ಜ್​ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣವೊಂದು ನಡೆದಿದೆ. ಹುಬ್ಬಳ್ಳಿಯ ಹಳೇ ಬಸ್​ ನಿಲ್ದಾಣದ ಬಳಿಯ ವಸತಿ ಗೃಹದಲ್ಲಿ ಘಟನೆ ನಡೆದಿದೆ.

ಮೈಸೂರು ಮೂಲದ ಶಾಂತಲಾ ಸುಪ್ರೀತ ಬೆಳಗಾವಿ (43) ಆತ್ಮಹತ್ಯೆ ಮಾಡಿಕೊಂಡವರು. ಬೆಂಗಳೂರಿನ ನೆಲಮಂಗಲದಲ್ಲಿ ಶಾಂತಲಾ ಪರಿಸರ ಅಭಿಯಂತರರಾಗಿದ್ದರು. ಪತಿ ಸುಪ್ರೀತ್​ ಹುಬ್ಬಳ್ಳಿಯಲ್ಲಿ ಲೀಸ್​ ಲಾಡ್ಜ್​ ನಡೆಸುತ್ತಿದ್ದು, ಅದೇ ಲಾಡ್ಜ್​ನಲ್ಲಿ ಶಾಂತಲಾ ನೇಣು ಹಾಕಿಕೊಂಡಿದ್ದರು.

2021ರ ಅಕ್ಟೋಬರ್​ನಲ್ಲಿ ನಮ್ಮ ಏಕಮಾತ್ರ ಪುತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಇದೇ ವಿಚಾರವಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂಬುದಾಗಿ ಶಾಂತಲಾ ಡೆತ್​ನೋಟ್ ಬರೆದಿಟ್ಟಿದ್ದರು. ಹುಬ್ಬಳ್ಳೀ ಉಪನಗರ ಠಾಣೆ ಇನ್​ಸ್ಪೆಕ್ಟರ್​ ಡಿ.ಬಿ. ರವಿಚಂದ್ರ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net