ಕ್ವಾರಂಟೈನ್​ ಮುಗಿಯುತ್ತಿದ್ದಂತೆ ಗಂಡ, ಮಗುವನ್ನು ಬಿಟ್ಟು ಪ್ರಿಯಕರನೊಂದಿಗೆ ಮಹಿಳೆ ಪರಾರಿ!

illicit Relationship
Published on

ಉಡುಪಿ: ವಿವಾಹಿತ ಮಹಿಳೆಯೊಬ್ಬಳು ತನ್ನ ಮಗುವನ್ನು ತವರು ಮನೆಯಲ್ಲಿ ಬಿಟ್ಟು ಪ್ರಿಯಕರನ ಜತೆ ಪರಾರಿಯಾದ ಘಟನೆ ಕಾರ್ಕಳ ತಾಲೂಕಿನ ಮರ್ಣೆ ಗ್ರಾಮದಲ್ಲಿ ‌ನಡೆದಿದೆ.

ಅಜೆಕಾರು ಕೈಕಂಬ ನಿವಾಸಿ ಮುಬೀನಾ (28)‌ ಎಂಬುವರು ಪರಾರಿಯಾದ ಮಹಿಳೆ. ಮಂಗಳೂರಿಗೆ ಮದುವೆಗೆ ಹೋದ ಕಾರಣಕ್ಕೆ ಈ ಮಹಿಳೆ ತಾಯಿ ಮತ್ತು ಸಹೋದರನ ಜತೆ ಹೋಂ ಕ್ವಾರಂಟೈನ್ ಆಗಿದ್ದರು. ಹೋಂ ಕ್ವಾರಂಟೈನ್ ಅವಧಿ ಮುಗಿಯುತ್ತಿದ್ದಂತೆ ತನ್ನ ಹಳೇ ಪ್ರಿಯಕರನ ಜತೆ ಪರಾರಿಯಾಗಿದ್ದಾಳೆ.

ನಾಪತ್ತೆಯಾದ ಮುಬೀನಾ 8 ವರ್ಷದ ಹಿಂದೆ ಉದ್ಯಾವರದ ಸಾಜಿದ್‌ ಎಂಬುವವನೊಂದಿಗೆ ಮದುವೆಯಾಗಿ ಪುಣೆಯ ಲೋನಾವಲದಲ್ಲಿ ನೆಲೆಸಿದ್ದರು. ಕಳೆದ 4 ತಿಂಗಳ ಹಿಂದೆ ಕೌಟುಂಬಿಕ ಸಮಸ್ಯೆಯಿಂದ 8 ವರ್ಷದ ಮಗಳೊಂದಿಗೆ ಊರಿಗೆ ಬಂದು ಹೆತ್ತವರೊಂದಿಗೆ ವಾಸವಾಗಿದ್ದರು.

ಬಳಿಕ‌ ಕರೊನಾ ವೈರಸ್ ಹಿನ್ನಲೆಯಲ್ಲಿ ‌ಲಾಕ್‌ಡೌನ್ ಘೋಷಣೆಯಾಗಿದ್ದು ಲಾಕ್ ಡೌನ್ ಸಂದರ್ಭದಲ್ಲಿ ಮಂಗಳೂರಿನಲ್ಲಿ ‌ನಡೆದ ವಿವಾಹ ‌ಕಾರ್ಯಕ್ರಮಕದಲ್ಲಿ ಭಾಗವಹಿಸಿ, ಮರಳಿ ಊರಿಗೆ ಬಂದಿದ್ದರು. ಮುಬಿನಾ ಕಾಣೆಯಾದ ಬಗ್ಗೆ ಅಜೆಕಾರು ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು. ಇದೀಗ ಮೊಬಿನಾ ಪತ್ತೆಯಾಗಿದ್ದಾಳೆ, ಆಕೆಯನ್ನು ಪೋಷಕರ ಜತೆಗೆ ಕಳುಹಿಸಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net