ಕೆಲಸದಾಳಿನ ಜತೆ ಸೇರಿ ಪತಿಯನ್ನೇ ಕೊಲೆಗೈದ ಪತ್ನಿ! ಕಸದ ರಾಶಿಯಲ್ಲೇ ಶವವನ್ನು ಹೂತಿಟ್ಟ ಜೋಡಿ

murder
Published on

ಬೆಂಗಳೂರು: ಮನೆಯ ಕೆಲಸದ ಆಳಿನ ಜತೆ ಸೇರಿ ಪತ್ನಿಯೇ ಪತಿಯ ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಘಟನೆ ಆರು ತಿಂಗಳ ಹಿಂದೆಯೇ ನಡೆದಿದ್ದು, ಇದೀಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.

ಬೆಂಗಳೂರು ಉತ್ತರ ತಾಲೂಕಿನ ತೋಟದಗುಡ್ಡದಹಳ್ಳಿಯಲ್ಲಿ ಇಂತಹ ಘಟನೆ ನಡೆದಿದೆ. ಶಿವಲಿಂಗಯ್ಯ(46) ಪತ್ನಿ ಶೋಭ (44) ಜತೆ ಜೀವನ ನಡೆಸುತ್ತಿದ್ದ. ಅವರ ಮನೆಯಲ್ಲಿ ರಾಮ (45) ಹೆಸರಿನ ವ್ಯಕ್ತಿ ಕೆಲಸದ ಆಳಾಗಿ ದುಡಿಯುತ್ತಿದ್ದ. ಜೂನ್​ 1ರಂದು ರಾಮ ಮತ್ತು ಶೋಭ ಇಬ್ಬರೂ ಜತೆಯಾಗಿ ಶಿವಲಿಂಗಯ್ಯನನ್ನು ಕೊಲೆ ಮಾಡಿದ್ದಾರೆ. ಅದಾದ ನಂತರ ಕೊಲೆ ವಿಚಾರ ಯಾರಿಗೂ ತಿಳಿಯಬಾರದೆಂದು ಮೃತ ದೇಹವನ್ನ ಕಸದ ರಾಶಿಯಲ್ಲಿ ಹೂತ್ತಿಟ್ಟಿದ್ದಾರೆ.

ಕೊಲೆಯಾಗಿರುವ ಶಿವಲಿಂಗಯ್ಯ
ಕೊಲೆಯಾಗಿರುವ ಶಿವಲಿಂಗಯ್ಯ

ಶಿವಲಿಂಗಯ್ಯ ಸಾಕಷ್ಟು ದಿನದಿಂದ ಕಾಣದ್ದನ್ನು ಗಮನಿಸಿದ ತಮ್ಮ ಪುಟ್ಟರಾಜು, ನವೆಂಬರ್​ನಲ್ಲಿ ಪೊಲೀಸ್​ ಠಾಣೆಯಲ್ಲಿ ಅಣ್ಣ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದಾನೆ. ನಾಪತ್ತೆ ಪ್ರಕರಣದ ಬಗ್ಗೆ ತನಿಖೆ ಆರಂಭಿಸಿದ ಪೊಲೀಸರಿಗೆ ಶೋಭ ಮೇಲೆ ಅನುಮಾನ ಬಂದಿದ್ದು, ತನಿಖೆ ನಡೆಸಿದಾಗ ನಿಜಾಂಶ ಹೊರಬಿದ್ದಿದೆ. ಕೊಲೆ ಮಾಡಿದ್ದನ್ನು ಶೋಭ ಮತ್ತು ರಾಮ ಒಪ್ಪಿಕೊಂಡಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ರಾಮ ಮತ್ತು ಶೋಭ ನಡುವೆ ಅಕ್ರಮ ಸಂಬಂಧವಿದ್ದು, ಅದೇ ಕಾರಣಕ್ಕೆ ಈ ಕೊಲೆ ಮಾಡಲಾಗಿದೆ ಎಂದು ಮೃತನ ಕುಟುಂಬದವರು ಆರೋಪಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net