ಗಂಡನ ಕುತ್ತಿಗೆ ಮೇಲೆ ಕಾಲಿಟ್ಟು ಉಸಿರು ನಿಲ್ಲಿಸಿದ ಪತ್ನಿ! ಮಕ್ಕಳು ಇಲ್ಲದ ವೇಳೆ ಆ ರಾತ್ರಿ ನಡೆಯಿತು ದುರಂತ

crime
Published on

ಬೆಂಗಳೂರು: ಗಂಡನ ಕುತ್ತಿಗೆ ಮೇಲೆ ಕಾಲು ಇಟ್ಟು ಪತ್ನಿಯೇ ಕೊಲೆ ಮಾಡಿರುವ ಘಟನೆ ಜೆ.ಜೆ.ನಗರದಲ್ಲಿ ಬೆಳಗಿನ ಜಾವ 3.15ರಲ್ಲಿ ಸಂಭವಿಸಿದೆ.

ಮೋಹನ್(41) ಕೊಲೆಯಾದವ. ಈತನ ಪತ್ನಿ ಪದ್ಮ(37) ಆರೋಪಿ. ಗಂಡ-ಹೆಂಡತಿ ಇಬ್ಬರೂ ಬಿಬಿಎಂಪಿ ಪೌರ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಈ ದಂಪತಿಗೆ ಮೂವರು ಮಕ್ಕಳಿದ್ದಾರೆ.

ಬಿಬಿಎಂಪಿಯಲ್ಲಿ ಕಸದ ಆಟೋ ಚಾಲಕನಾಗಿದ್ದ ಮೋಹನ್, ಕುಡಿತಕ್ಕೆ ದಾಸನಾಗಿದ್ದ. ಕುಡಿತ ಚಟ ಬಿಡಿಸುವ ಸಲುವಾಗಿ ಮೋಹನ್​ನನ್ನು ಪುನರ್ ವಸತಿ ಕೇಂದ್ರಕ್ಕೆ ಪತ್ನಿ ಸೇರಿಸಿದ್ದಳು. ಅಲ್ಲಿಂದ ಬಂದ ಬಳಿಕವೂ ಆತ ಕುಡಿಯಲು ಶುರು ಮಾಡಿದ್ದ. ಅಲ್ಲದೆ, ಪತ್ನಿಯ ಶೀಲದ ಮೇಲೆ ಶಂಕಿಸಿ ಜಗಳವಾಡುತಿದ್ದ.

ಭಾನುವಾರ ರಾತ್ರಿಯೂ ಮೋಹನ್​ ಕುಡಿದು ಬಂದಿದ್ದ. ಈ ವೇಳೆ ಮನೆಯಲ್ಲಿ ಮಕ್ಕಳು ಇರಲಿಲ್ಲ. ದಂಪತಿ ನಡುವೆ ನಡೆದ ಜಗಳ ವಿಕೋಪಕ್ಕೆ ತಿರುಗಿದ್ದು, ಮೋಹನ್ ಕುತ್ತಿಗೆ ಮೇಲೆ ಪತ್ನಿ ಕಾಲಿಟ್ಟು ಉಸಿರುಗಟ್ಟಿಸಿದ್ದಾಳೆ. ಪ್ರಜ್ಞೆ ತಪ್ಪಿದ್ದಾಗ ಅಕ್ಕಪಕ್ಕದವರ ಸಹಾಯದಿಂದ ಹತ್ತಿರದ ಆಸ್ಪತ್ರೆಗೆ ಸೇರಿಸಿದ್ದು, ಮಾರ್ಗಮಧ್ಯೆಯೇ ಮೋಹನ್ ಮೃತಪಟ್ಟಿದ್ದ. ಪರಾರಿಯಾಗಿದ್ದ ಪದ್ಮಾಳನ್ನ ಜೆಜೆ ನಗರ ಪೊಲೀಸರು ಹುಡುಕಿ ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net