ಭತ್ತದ ಗದ್ದೆಗೆ ನುಗ್ಗಿದ ನೆರೆ ನೀರು

paddy-2
ಮಿಯ್ಯರು ಗ್ರಾಮದ ಐಕುರಿ ಶಿವರಾಮ ಆಚಾರ್ಯ ಎಂಬುವರಿಗೆ ಸೇರಿದ ಭತ್ತದ ಗದ್ದೆಗೆ ನೆರೆ ನೀರು ನುಗ್ಗಿ ಹಾನಿಯಾಗಿರುವುದು
Published on

ಕಾರ್ಕಳ: ತಾಲೂಕಾದ್ಯಂತ ಬುಧವಾರ ಹಾಗೂ ಗುರುವಾರ ಸುರಿದ ಭಾರಿ ಗಾಳಿ ಮಳೆಗೆ ಮಿಯ್ಯರು ಗ್ರಾಮದ ಕಜೆ ಮನೆ ನಿವಾಸಿ ಗಣೇಶ್, ಶಿರ್ಲಾಲು ಗ್ರಾಮದ ಮಲ್ಲಮಾರು ನಿವಾಸಿ ರಾಜು ಪೂಜಾರಿ ಎಂಬುವರ ಮನೆಗೆ ಮರ ಬಿದ್ದು ಹಾನಿಯಾಗಿದೆ. ಬೋಳ ಗ್ರಾಮದ ಕಿನ್ನಿ ಕೊರಡೆಲು ನಿವಾಸಿ ಪ್ರಭಾಕರ ಮೂಲ್ಯ, ಮಿಯ್ಯರು ಗ್ರಾಮದ ಐಕುರಿ ಶಿವರಾಮ ಆಚಾರ್ಯ ಎಂಬುವರ ಭತ್ತದ ಗದ್ದೆಗೆ ನೆರೆ ನೀರು ನುಗ್ಗಿ ನಷ್ಟ ಉಂಟಾಗಿದೆ.
ಸಾಣೂರು ಗ್ರಾಮದ ಮಸೀದಿ ಬಳಿಯ ನಿವಾಸಿ ರತ್ನ ಎಂಬುವರ ಮನೆಗೆ ನೀರು ನುಗ್ಗಿ ಮನೆ ಗೋಡೆ ಭಾಗಶಃ ಬಿದ್ದು ಹಾನಿಯಾಗಿದೆ. ಪಳ್ಳಿ ಗ್ರಾಮದ ಕಲ್ಕಾರು ನಿವಾಸಿ ಸುಜಾತಾ ನಾಯ್ಕ ಎಂಬುವರ ಮನೆ ಗೋಡೆ ಕುಸಿದಿದೆ. ಪಳ್ಳಿ ಗ್ರಾಮದ ಧೂಮೊಟ್ಟು ನಿವಾಸಿ ವಿನೋದಾ ಅವರ ಮನೆ ಶೀಟು ಹಾಗೂ ಪಕ್ಕಾಸು ಗಾಳಿ ಮಳೆಯಿಂದ ಹಾನಿಯಾಗಿದೆ. ಕಾಂತಾವರ ಕಟ್ಟಿಗೆ ನರಸಿಂಹ ಕಾರಂತ ಮನೆ ಬಳಿಯಲ್ಲಿ ರಸ್ತೆಯ ಬದಿಯಲ್ಲಿ ಭೂ ಕುಸಿತ ಉಂಟಾಗಿದೆ 5.ಮೀ ನಷ್ಟು ರಸ್ತೆ ಕುಸಿತಗೊಂಡು ನೆಲ್ಲಿಬೆಟ್ಟು ಬಾರ್ದಲ, ಕೇಮಾರು ಭಾಗದ ಸಂಪರ್ಕ ಕಡಿತಗೊಂಡಿದೆ. ಬೈಲೂರು ಗ್ರಾಮದ ಹೇಮಲತಾ ಎಂಬುವರ ಮನೆಗೆ ಗಾಳಿ ಮಳೆಯಿಂದ ಹಾನಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net