ದುರಸ್ತಿ ಮಾಡಲು ಗುತ್ತಿಗೆದಾರರಿಗೆ ಸೂಚನೆ : ಕಾವಳಪಡೂರು ನತ್ಯಾಜ್ಯ ಘಟಕಕ್ಕೆ ಅಧಿಕಾರಿಗಳ ಭೇಟಿ

New Project (48)
Published on

ಬಂಟ್ವಾಳ: ಮಳೆಗಾಲದಲ್ಲಿ ಸೋರುತ್ತಿರುವ ಕಾವಳಪಡೂರು ಗ್ರಾಪಂನ ನೂತನ ನತ್ಯಾಜ್ಯ ಘಟಕಕ್ಕೆ ಭೇಟಿ ನೀಡಿದ ಅಧಿಕಾರಿಗಳು, ಕಟ್ಟಡ ದುರಸ್ತಿಗೊಳಿಸಲು ಗುತ್ತಿಗೆದಾರರಿಗೆ ಆದೇಶಿಸಿದ್ದಾರೆ.

ನೂತನ ನ ತ್ಯಾಜ್ಯ ಘಟಕ ಸೋರುತ್ತಿದ್ದು, ಕಳಪೆ ಕಾಮಗಾರಿ ನಡೆಸಲಾಗಿದೆ ಎಂದು ಗ್ರಾಪಂ ಅಧ್ಯಕ್ಷ ಲಕ್ಷ್ಮೀನಾರಾಯಣ ಶರ್ಮ ಆರೋಪಿಸಿ, ಬಂಟ್ವಾಳ ಪಂಚಾಯತ್‌ರಾಜ್ ಇಂಜಿನಿಯರಿಂಗ್ ಉಪ ವಿಭಾಗದ ಅಭಿಯಂತ ಮತ್ತು ಬಂಟ್ವಾಳ ತಾಪಂ ಕಾರ್ಯನಿರ್ವಹಣಾಧಿಕಾರಿಗೆ ದೂರು ನೀಡಿದ್ದರು.

ಟಕದ ಕಾಮಗಾರಿ 5 ವರ್ಷಗಳ ಹಿಂದೆ ಆರಂಭಗೊಂಡಿದ್ದು, ಆನ್‌ಲೈನ್ ಮೂಲಕ ಗುತ್ತಿಗೆ ವಹಿಸಲಾಗಿತ್ತು. ಘಟಕವನ್ನು 18 ಲಕ್ಷ ರೂ. ವೆಚ್ಚದಲ್ಲಿ ಕಾವಳಪಡೂರು ಗ್ರಾ.ಪಂ. ವ್ಯಾಪ್ತಿಯ ಬರ್ಕಟ್ಟ ಎಂಬಲ್ಲಿ ನಿರ್ಮಿಸಲಾಗಿತ್ತು. ಕಾವಳ ಪಡೂರು ಗ್ರಾಪಂ ವ್ಯಾಪ್ತಿಯ ಎರಡು ಗ್ರಾಮಗಳಾದ ಕಾವಳಪಡೂರು ಹಾಗೂ ಕಾಡಬೆಟ್ಟು ಗ್ರಾಮಗಳಿಂದ ಸಂಗ್ರಹವಾದ ನ ತ್ಯಾಜ್ಯವನ್ನು ಇಲ್ಲಿ ವಿಲೇವಾರಿ ನಡೆಸಲಾಗುತ್ತಿದೆ. ಮಹಿಳೆಯರೇ ವಾಹನ ಚಾಲನೆ ಸಹಿತ ನತ್ಯಾಜ್ಯ ಸಂಗ್ರಹಣೆ ನಡೆಸುತ್ತಿದ್ದಾರೆ. ಆದರೆ ಇದೀಗ ಸುರಿದ ಮಳೆಗೆ ಟಕದ ಮೇಲ್ಛಾವಣಿ ಸೋರುತ್ತಿದ್ದು, ಕಳಪೆ ಕಾಮಗಾರಿ ಎಂದು ಅಧ್ಯಕ್ಷರು ಆರೋಪಿಸಿದ್ದರು.

ಪಂಚಾಯತ್‌ರಾಜ್ ಇಂಜಿನಿಯರಿಂಗ್ ಉಪ ವಿಭಾಗದ ಅಭಿಯಂತರಾದ ಕೃಷ್ಣ ಮತ್ತು ತಾರಾನಾಥ ಅವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಗ್ರಾಪಂ ಅಧ್ಯಕ್ಷ ಲಕ್ಷ್ಮೀನಾರಾಯಣ ಶರ್ಮ, ಮಾಜಿ ಅಧ್ಯಕ್ಷರಾದ ಪ್ರಮೋದ್ ಕುಮಾರ್ ರೈ, ಅಬ್ದುಲ್ ರರಝಾಕ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net