ಖಾಕಿ ನಡೆಯಿಂದ ಮೂಲಭೂತ ಹಕ್ಕುಗಳಿಗೆ ಧಕ್ಕೆ: ಹಿಂದು ಪರ ಸಂಘಟನೆಗಳಿಂದ ಆಕ್ರೋಶ

New Project (39)
Published on

ಕಡಬ: ಕಡಬ ಠಾಣಾ ವ್ಯಾಪ್ತಿಯಲ್ಲಿ ಕಳೆದ ಕೆಲವು ದಿನಗಳಿಂದ ಕಡಬ ಪೊಲೀಸರು ಕಾನೂನು ಬಾಹಿರವಾಗಿ ಸಂಘಟನೆಯ ಪ್ರಮುಖರ ಮನೆಗಳಿಗೆ ನುಗ್ಗಿ ವೈಯಕ್ತಿಕ ಛಾಯಾಚಿತ್ರ ತೆಗೆಯುತ್ತಿರುವುದನ್ನು ಖಂಡಿಸಿ ಕಡಬ ಠಾಣಾ ವಠಾರದಲ್ಲಿ ಬುಧವಾರ ಹಿಂದು ಪರ ಸಂಟನೆಗಳಿಂದ ಪ್ರತಿಭಟನೆ ನಡೆಯಿತು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಪ್ರಮುಖರಾದ ಮುರಳಿಕೃಷ್ಣ ಹಸಂತಡ್ಕ, ವೆಂಕಟ್ ವಳಲಂಬೆ, ಪುಲಸ್ತ್ಯಾ ರೈ, ನವೀನ್ ನೆರಿಯ, ಕಡಬ ಠಾಣೆಯ ಪೊಲೀಸರು ಕಳೆದ ಕೆಲವು ದಿನಗಳಿಂದ ಸಂಘಟನೆಯ ಪ್ರಮುಖರ ಮನೆಗಳಿಗೆ ಮದ್ಯ ರಾತ್ರಿಯಲ್ಲಿ ತೆರಳಿ ಛಾಯಾಚಿತ್ರ ತೆಗೆಯುತ್ತಿದ್ದಾರೆ. ಇದರಿಂದ ಆತಂಕ ಸೃಷ್ಟಿಯಾಗುತ್ತಿದೆ. ಖಾಸಗಿ ಜೀವನಕ್ಕೆ ಮೂಲಭೂತ ಹಕ್ಕುಗಳಿಗೆ ಧಕ್ಕೆಯಾಗುತ್ತಿದೆ ಎಂದು ಆರೋಪಿಸಿದರು.

ಪ್ರಮುಖರಾದ ಆಶಾ ತಿಮ್ಮಪ್ಪ, ಕಿಶೋರ್ ಶಿರಾಡಿ, ಹರೀಶ್ ಕಂಜಪಿಳಿ, ಶ್ರೀಧರ ತೆಂಕಿಲ, ಪ್ರದೀಪ್ ರೈ ಮನವಳಿಕೆ, ಎಂ.ಆರ್.ಕೃಷ್ಣ, ಪ್ರಮೋದ್ ರೈ ನಂದುಗುರಿ, ಅಜಿತ್ ಆರ್ತಿಲ, ಪ್ರಮೀಳಾ ಲೋಕೇಶ್, ವಾಸುದೇವ ಭಟ್ ಕಡ್ಯ, ಆಶ್ವಿತ್ ಖಂಡಿಗ, ವೀಣಾ ಕೊಲ್ಲೆಸಾಗು, ಮೋಹನ್ ದಾಸ್ ದೋಳ್ಪಾಡಿ ಮೊದಲಾದ ಪ್ರಮುಖರು ಭಾಗವಹಿಸಿದ್ದರು. ಪ್ರತಿಭಟನೆ ಬಳಿಕ ಕಡಬ ಠಾಣಾ ಎಸ್.ಐ. ಅಭಿನಂದನ್ ಮೂಲಕ ಎಸ್.ಪಿ. ಅವರಿಗೆ ಮನವಿ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net