

ಬೆಂಗಳೂರು: ವಿಜ್ಞಾನ ಎನ್ನುವುದು ತತ್ವಜ್ಞಾನಕ್ಕೆ ಪೂರಕವಾಗಿದ್ದು ವಿಜ್ಞಾನಿಗಳು ದೈವಭಕ್ತರಾದರೆ ಆಶ್ಚರ್ಯ ಪಡಬೇಕಾಗಿಲ್ಲ ಎಂದು ಸೋಸಲೆ ವ್ಯಾಸರಾಜ ಮಠದ ವಿದ್ಯಾಶ್ರೀಶತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಗಾಂಧಿ ಬಜಾರ್ನ ವ್ಯಾಸರಾಜ ಮಠದಲ್ಲಿ ನಡೆಯುತ್ತಿರುವ ಚಾತುರ್ಮಾಸ್ಯದ ಸಂದರ್ಭದಲ್ಲಿ ಚಂದ್ರಯಾನ&3ರಲ್ಲಿ ಪಾಲ್ಗೊಂಡ ಇಸ್ರೋ ವಿಜ್ಞಾನಿಗಳನ್ನು ಸನ್ಮಾನಿಸಿ ಶನಿವಾರ ಮಾತನಾಡಿದರು.
ಜಗತ್ತಿನ ಅನೇಕ ರಹಸ್ಯಗಳನ್ನು ವಿಜ್ಞಾನ ತಿಳಿಸಿಕೊಡುತ್ತದೆ. ಅವುಗಳನ್ನು ಸೂಕ್ಷ್ಮಮವಾಗಿ ಗಮನಿಸಿದಾಗ ಅದ್ಭುತ ರಚನೆಯೊಂದು ತನ್ನಿಂತಾನೇ ಹುಟ್ಟಿಕೊಳ್ಳಲು ಸಾಧ್ಯವಿಲ್ಲ. ಇದರ ಹಿಂದೆ ಯಾವುದೋ ಒಂದು ಪ್ರಖರ ಶಕ್ತಿ ನಿಂತಿದೆ ಎಂಬುದು ಅವರ ಮನಸ್ಸಿನಲ್ಲಿ ಬೇರೂರುತ್ತದೆ. ಹೀಗಿರುವಾಗ ವಿಜ್ಞಾನಿಗಳು ದೈವಭಕ್ತರಾದರೆ ಅತಿಶಯೋಕ್ತಿಯಲ್ಲ ಎಂದು ಹೇಳಿದರು.
ವಿಜ್ಞಾನ ಮತ್ತು ತತ್ವಜ್ಞಾನಗಳ ಮಧ್ಯೆ ಒಂದು ಕಾಲದಲ್ಲಿ ತತ್ವಜ್ಞಾನ ಮೇಲುಗೈ ಸಾಧಿಸಿತ್ತು. ಈಗ ವಿಜ್ಞಾನ ಮುಂದುವರೆಯುತ್ತಿದ್ದು, ತತ್ವಜ್ಞಾನ ಹಿಂದೆ ಸರಿದಿದೆ. ಇದಕ್ಕೆ ಕಾರಣ ಉಪನಿಷತ್ತು, ವೇದಗಳಲ್ಲಿ ಅಡಕವಾಗಿರುವ ತತ್ವಗಳನ್ನು ಗುರುತಿಸದಿರುವುದು ಎಂದರು.
ಇಸ್ರೋ ಡೈರೆಕ್ಟರ್ ರಾಮಕೃಷ್ಣ, ಡೆಪ್ಯೂಟಿ ಡೈರೆಕ್ಟರ್ ಎಂ.ಆರ್. ರಾವೇಂದ್ರ, ಡೆಪ್ಯೂಟಿ ಡೈರೆಕ್ಟರ್ ನಂದಿನಿ ಹರಿನಾಥ್, ಗ್ರೂಪ್ ಡೈರೆಕ್ಟರ್ ವೈ.ಎಲ್. ಮಧುಸೂದನ್ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಇಸ್ರೋದ ನಿವೃತ್ತ ಡೆಪ್ಯೂಟಿ ಡೈರೆಕ್ಟರ್ ಬಿ.ಎಸ್. ಕಿರಣ್, ನಿವೃತ ಗ್ರೂಪ್ ಡೈರೆಕ್ಟರ್ ಸುಧೀಂದ್ರ ಬಿಂದಗಿ, ನಿವೃತ್ತ ವಿಜ್ಞಾನಿ ಶ್ರೀಮತಿ ದ್ವಾರಕನಾಥ್, ನಿವೃತ್ತ ಹಿರಿಯ ಪ್ರಾಜೆಕ್ಟ್ ಅಸಿಸ್ಟೆಂಟ್ ಸುಕನ್ಯಾ ಮೂರ್ತಿ, ನಿವೃತ್ತ ಟೆಕ್ನಿಕಲ್ ಅಸಿಸ್ಟೆಂಟ್ ವೀಣಾ ರಾಮಪ್ರಸಾದ್, ನಿವೃತ್ತ ವಿಜ್ಞಾನಿ ಜಯಲಕ್ಷಿ$್ಮ ಚಂದ್ರಶೇಖರ್ ಅವರನ್ನೂ ಸನ್ಮಾನಿಸಿ ಅಭಿನಂದಿಸಲಾಯಿತು.