

ಕೋಟ: ವಿಠ್ಠಲ ಪೈ ಸಾಲಿಗ್ರಾಮ ಕೇವಲ ದಾನಿಗಳಲ್ಲ. ಕೆಲಸಗಾರರೊಂದಿಗೆ ಕೆಲಸ ವಾಡುವ ಕೆಲಸಗಾರ. ಹುಟ್ಟಿದವನು ಪ್ರತಿಯೊಬ್ಬನೂ ಸಾಯಲೇಬೇಕು. ಆದರೆ ಹುಟ್ಟು ಸಾವಿನ ನಡುವೆ ನಾವು ವಾಡಬೇಕಾದದ್ದೇನು? ಅವೆಲ್ಲವನ್ನು ಕಿರು ಅವಧಿಯಲ್ಲಿಯೇ ಮುಗಿಸಿ ವಿಠ್ಠಲ್ ಪೈ ಮುಕ್ತಿ ಕಂಡುಕೊಂಡವರು ಎಂದು ತೆಕ್ಕಟ್ಟೆ ಕೃಷ್ಣರಾಯ ಶಾನುಭಾಗ್ ಹೇಳಿದರು.
ಕೊಮೆಕೊರವಡಿ ಶ್ರೀ ಬೊಬ್ಬರ್ಯ ಶ್ರೀ ಹಳೆಯಮ್ಮ ದೇವಸ್ಥಾನ ವಠಾರ ಕೊಮೆಯಲ್ಲಿ ಶ್ರೀ ಪಟ್ಟಾಭಿ ರಾಮಚಂದ್ರ ಭಜನಾ ಮಂದಿರ, ಶ್ರೀ ಮಲಸಾವರಿ ಶ್ರೀ ಮಹಾಕಾಳಿ ದೇವಸ್ಥಾನ, ಶ್ರೀ ಶನೇಶ್ವರ ದೇವಸ್ಥಾನ, ಕೊಮೆ ಕೊರವಡಿ ವಿವಿದೋದ್ಧೇಶ ಸಹಕಾರಿ ಸಂ, ಅಭಿವಾನ್ ಯುವಕ ಮಂಡಲ, ಶ್ರೀ ಮಹಾಕಾಳಿ ಫ್ರೆಂಡ್ಸ್, ಯಶಸ್ವೀ ಕಲಾವೃಂದ ಕೊಮೆ ಸಂಯುಕ್ತ ಆಶ್ರಯದಲ್ಲಿ ದಿ. ಎಸ್. ವಿಠ್ಠಲ ಪೈ ಸಾಲಿಗ್ರಾಮ ಇವರಿಗೆ ಭಕ್ತಿ, ನುಡಿ ಮತ್ತು ಗಾನ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಚೇಂಪಿ ಪ್ರಕಾಶ್ ಭಟ್ ಮಾತನಾಡಿ, ಶ್ರೀಯುತರು ಛಲಗಾರ. ಸಂಕಲ್ಪ ವಾಡಿಕೊಂಡ ಕೆಲಸವನ್ನು ಎಷ್ಟೇ ಕಷ್ಟವಾದರೂ ವಾಡಿಯೇ ವಾಡುತ್ತಾರೆ ಎಂದರು.
ಉದ್ಯಮಿ ಆನಂದ್ ಸಿ. ಕುಂದರ್ ಮಾತನಾಡಿ, ಸವಾಜದಲ್ಲಿ ಹುಟ್ಟುವುದು ಮುಖ್ಯವಲ್ಲ, ಹುಟ್ಟಿದ ದಿನಗಳಲ್ಲಿ ಸವಾಜಕ್ಕಾಗಿ ಏನು ವಾಡಿದ್ದಾರೆ ಎನ್ನುವುದು ಮುಖ್ಯ. ಅಗಲಿದ ಆತ್ಮಕ್ಕೆ ಸದ್ಗತಿ ದೊರೆಯಲಿ ಎಂದರು.
ಮಲ್ಯಾಡಿ ಶಿವರಾಮ ಶೆಟ್ಟಿ, ವೆಂಕಟೇಶ್ ಭಟ್, ಗೋವಿಂದ, ಶೇಖರ್ ಕಾಂಚನ್, ಸೋಮ ಕಾಂಚನ್, ಮಂಜುನಾಥ ಪ್ರಭು, ಪಾಂಡುರಂಗ ಕೊಮೆ, ಹರೀಶ್ ಪುಷ್ಪ ನಮನ ಸಲ್ಲಿಸಿದರು. ಕೊಮೆ ಗೋಪಾಲ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.