

ಕುಂದಾಪುರ: ನಾಯಕತ್ವ ಅದೊಂದು ಪ್ರಕ್ರಿಯೆ. ಅದನ್ನು ನಾವು ಸದುಪಯೋಗ ಪಡಿಸಿಕೊಳ್ಳಬೇಕು. ಶಿಕ್ಷಕರು ಮಣ್ಣಿನ ಮುದ್ದೆಯಂತಿರುವ ಮಕ್ಕಳನ್ನು ತಿದ್ದಿ, ತಿಡಿ ಸರಿಪಡಿಸುವ ಕಾರ್ಯ ವಾಡುತ್ತಾರೆ. ವಿದ್ಯಾರ್ಥಿ ನಾಯಕರು ಎಲ್ಲ ವಿದ್ಯಾರ್ಥಿಗಳಿಗೆ ವಾದರಿಯಾಗಬೇಕು ಎಂದು ಜೆಸಿಐ ವಲಯ 15ರ ಅಧ್ಯಕ್ಷ ಅಭಿಲಾಷ್ ಹೇಳಿದರು.
ಕುಂದಾಪುರದ ಹೋಲಿ ರೋಜರಿ ಆಂಗ್ಲ ವಾಧ್ಯಮ ಶಾಲೆಯಲ್ಲಿ ಸೋಮವಾರ ನಡೆದ ವಿದ್ಯಾರ್ಥಿ ಸಂಸತ್ತು ಮತ್ತು ವಿವಿಧ ಸಂಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಹಾಗೂ ಶಾಲಾ ಜಂಟಿ ಕಾರ್ಯದರ್ಶಿ ಪಾವ್ಲ್ ರೇಗೋ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕಿ ಸಿಸ್ಟರ್ ತೆರೆಸ್ ಶಾಂತಿ ಎ.ಸಿ. ವಿದ್ಯಾರ್ಥಿಗಳಿಗೆ ಪ್ರವಾಣ ವಚನ ಬೋಧಿಸಿದರು. ಸಹ ಶಿಕ್ಷಕಿ ಅಂಕಿತಾ ಸ್ವಾಗತಿಸಿದರು. ವಿದ್ಯಾರ್ಥಿ ನಾಯಕಿ ಪರ್ಲ್ ಅಲಿನಾ ಬರೆಟ್ಟೊ ವಂದಿಸಿದರು. ವಿದ್ಯಾರ್ಥಿನಿ ತನಿಷಾ ನಿರೂಪಿಸಿದರು.