ಶಿಕ್ಷಣ ಇಲಾಖೆ ಉಪ ನಿರ್ದೇಶಕ ಲೋಕೇಶ ಸಿ ಅವರಿಗೆ ಗೌರವ

gan (27)
Published on

ಕುಂದಾಪುರ: ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಡುಪಿ ಜಿಲ್ಲಾ ಉಪ ನಿರ್ದೇಶಕ ಲೋಕೇಶ ಸಿ. ಅವರನ್ನು ಕುಂದಾಪುರ ಫ್ರೆಂಡ್ಸ್ ವತಿಯಿಂದ ಉಪನಿರ್ದೇಶಕರ ಕಚೇರಿಯಲ್ಲಿ ಶುಕ್ರವಾರ ಗೌರವಿಸಲಾಯಿತು.

ಟೀಚರ್ ಕೋ ಅಪರೇಟಿವ್ ಬ್ಯಾಂಕ್ ನಿಕಟಪೂರ್ವ ಅಧ್ಯಕ್ಷ ವಿ.ಸಂತೋಷ್ ಕುವಾರ್ ಶೆಟ್ಟಿ, ಎ.ಪಿ.ಟಿ. ಪೆರ್ಡೂರು ಮುಖ್ಯ ಶಿಕ್ಷಕ ಸತೀಶ ಶೆಟ್ಟಿ, ಕುಂದಾಪುರ ವಲಯದ ಅನುದಾನಿತ ಪ್ರಾಥಮಿಕ ಶಾಲಾ ಸಂದ ವಲಯ ಅಧ್ಯಕ್ಷ ಪ್ರದೀಪ್ ಕುವಾರ್ ಭಂಡಾರಿ, ವೀರೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕೆಂಜೂರು ಶಾಲೆ ಮುಖ್ಯ ಶಿಕ್ಷಕ ನವೀನ್ ಚಂದ್ರ ಶೆಟ್ಟಿ, ಪಿ.ಎಂ.ಶ್ರೀ.ಕುವೆಂಪು ಶಾಲೆ ಶಿಕ್ಷಕ ಸದಾನಂದ ಶೆಟ್ಟಿ ಮತ್ತು ವಂಡ್ಸೆ ಸಮೂಹ ಸಂಪನ್ಮೂಲ ವ್ಯಕ್ತಿ ಎಂ. ನಾಗರಾಜ್ ಶೆಟ್ಟಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net