

ಕೋಟ: ಜಿಲ್ಲಾ ಪೊಲೀಸ್ ಇಲಾಖೆ ಪ್ರತಿ ಗ್ರಾಮ ವ್ಯಾಪ್ತಿಯಲ್ಲಿ ರಕ್ಷಣಾ ಕವಚವಾಗಿ ದೃಷ್ಟಿ ಯೋಜನೆಯನ್ನು ಜಾರಿಗೊಳಿಸಲು ಉದ್ದೇಶಿಸಿದ್ದು, ಈ ಕಾರ್ಯಕ್ಕೆ ಜನಸಾವಾನ್ಯರ ಸಹಕಾರ ಅಗತ್ಯ ಎಂದು ಉಡುಪಿ ಜಿಲ್ಲಾ ಡಿವೈಎಸ್ಪಿ ಪ್ರಭು ಡಿ.ಟಿ ಹೇಳಿದರು.
ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಸಹಕಾರದೊಂದಿಗೆ ಪಂಚಾಯಿತಿ ಸಭಾಂಗಣದಲ್ಲಿ ದೃಷ್ಟಿ ಯೋಜನೆ ಅನುಷ್ಠಾನದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ವಾತನಾಡಿದರು.
ಠಾಣಾ ವ್ಯಾಪ್ತಿಯ ಕಣ್ಗಾವಲಿಗೆ ದೃಷ್ಟಿ ಯೋಜನೆ ಪರಿಣಾಮಕಾರಿಯಾಗಲಿದೆ. ಯಾವುದೇ ಪ್ರಕರಣಗಳಿಗೆ ಈ ಯೋಜನೆ ಪೊಲೀಸ್ ಇಲಾಖೆಯೊಂದಿಗೆ ಸಹಕಾರಿಯಾಗಿ ಕಾರ್ಯನಿರ್ವಹಿಸಲಿದೆ.
ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಕನ್ಯಾ ಜೆ.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಗಿರಿಜಾ ಪೂಜಾರಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಅನುಸೂಯ ಹೇರ್ಳೆ, ವಿಜಯ ಫರ್ನಾಂಡಿಸ್ ಇದ್ದರು. ಕೋಟ ಠಾಣಾ ಮಹಿಳಾ ಪಿಎಸ್ಐ ಸುಧಾ ಪ್ರಭು ವಂದಿಸಿದರು. ಠಾಣಾಧಿಕಾರಿ ಪ್ರವೀಣ್ ಕುವಾರ್ ನಿರ್ವಹಿಸಿದರು.
ಕೋಟ ಠಾಣಾ ವ್ಯಾಪ್ತಿಯಲ್ಲಿ 60 ರಿಂದ 70 ಸಾವಿರ ಜನಸಂಖ್ಯೆಗೆ 38 ಪೊಲೀಸ್ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದು ಪ್ರಸ್ತುತ ಪ್ರಕರಣಗಳನ್ನು ಭೇದಿಸಲು ಈ ಯೋಜನೆ ಅಗತ್ಯ, ಈ ಯೋಜನೆ ಅನುಷ್ಠಾನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ವಾರ್ಗದರ್ಶನದಲ್ಲಿ ನಡೆಯಲಿದ್ದು, ಸಾಲಿಗ್ರಾಮ ಹಾಗೂ ತೆಕ್ಕಟ್ಟೆ ವ್ಯಾಪ್ತಿಯ ಎರಡು ವಿಭಾಗಗಳಾಗಿ ವಾರ್ಪಾಡುಗೊಳಿಸಿ ಜಂಬೋ ಸ್ಟಾರ್ ಸೆಕ್ಯೂರಿಟಿ ಪ್ರೈವೆಟ್ ಲಿಮಿಟೆಡ್ ಎಂಬ ಸಂಸ್ಥೆಯೊಂದಿಗೆ ಇಲಾಖೆ ಒಡಂಬಡಿಕೆ ಮೇರೆಗೆ ನಿವೃತ್ತ ಸೈನಿಕರಿಗೆ ತರಬೇತಿ ನೀಡಿ ಅವರ ಕಾರ್ಯವೈಖರಿಗೆ ಅನುಗುಣವಾಗಿ ಕಾರ್ಯನಿರ್ವಹಿಸಲು ಅನುವು ವಾಡಿ ಕೊಡಲಾಗುತ್ತದೆ. ಸಾರ್ವಜನಿಕರಿಂದ ಅಲ್ಪ ದೇಣಿಗೆ ಆ ಸಂಸ್ಥೆ ಸಂಗ್ರಹಿಸಲಿದೆ ಎಂದು ಪ್ರಭು ಡಿ.ಟಿ.ವಾಹಿತಿ ನೀಡಿದರು.