ಕಠಿಣ ಪರಿಶ್ರಮದಿಂದ ಜೀವನದಲ್ಲಿ ಸಾಧನೆ

gan (20)
Published on

ವಿಜಯವಾಣಿ ಸುದ್ದಿಜಾಲ ಕುಂದಾಪುರ

ಎಲ್ಲರೂ ಜೀವನದಲ್ಲಿ ಉತ್ತಮ ಹಂತಕ್ಕೆ ತಲುಪಬೇಕಾದರೆ ಶಿಕ್ಷಣವೇ ಅಡಿಪಾಯ. ಮುಖ್ಯವಾಗಿ ಮಹಿಳಾ ಸಶಕ್ತೀಕರಣದಲ್ಲಿ ವಿದ್ಯೆಯ ಪಾತ್ರ ಮಹತ್ತರವಾದುದು. ಕಠಿಣ ಪರಿಶ್ರಮ ಪಟ್ಟರೆ ಸಾಧನೆ ಸಿದ್ಧಿಸುತ್ತದೆ ಎಂದು ಮುಂಬೈ ಉದ್ಯಮಿ ಭರತ್ ಎಸ್.ಪೂಜಾರಿ ಹೇಳಿದರು.

ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘ, ಶ್ರೀ ನಾರಾಯಣ ಗುರು ಶೈಕ್ಷಣಿಕ, ಸಾಂಸ್ಕೃತಿಕ ದತ್ತಿ ಸಂಸ್ಥೆ ಆಶ್ರಯದಲ್ಲಿ ಕುಂದಾಪುರದ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ಭಾನುವಾರ ನಡೆದ ದಿ.ಸುರೇಶ್ ಎಸ್.ಪೂಜಾರಿ ಪಡುಕೋಣೆ ಅವರಿಂದ ಆರಂಭಗೊಂಡ 33ನೇ ವರ್ಷದ ವಿದ್ಯಾರ್ಥಿ ಸಹಾಯಧನ ವಿತರಣೆ, ಸಾಧಕರಿಗೆ ಸನ್ಮಾನ ಕಾರ‌್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘ ಅಧ್ಯಕ್ಷ ಅಶೋಕ ಪೂಜಾರಿ ಬೀಜಾಡಿ ಅಧ್ಯಕ್ಷತೆ ವಹಿಸಿದ್ದರು. ಹುಬ್ಬಳ್ಳಿಯ ಶ್ರೀ ಪಂಜುರ್ಲಿ ಗ್ರೂಪ್ ಆ್ ಹೋಟೆಲ್‌ನ ವಿಜಯ ಪಿ.ಪೂಜಾರಿ, ಡೈನಮಿಕ್ ಇನ್ಫೋಟೆಕ್‌ನ ಧೀರಜ್ ಹೆಜಮಾಡಿ, ಉದ್ಯಮಿಗಳಾದ ದುಬೈನ ಮಂಜುನಾಥ ಪೂಜಾರಿ, ನರಸಿಂಹ ಪೂಜಾರಿ, ರಾಘವೇಂದ್ರ ಬಿ.ಪೂಜಾರಿ ಬೆಂಗಳೂರು, ಹರೀಶ್ ಪೂಜಾರಿ ಶಿವಮೊಗ್ಗ, ಸಂಘದ ಉಪಾಧ್ಯಕ್ಷ ಶಿವರಾಮ ಪೂಜಾರಿ ಬಸ್ರೂರು, ಮಹಿಳಾ ಘಟಕ ಅಧ್ಯಕ್ಷೆ ಗಿರಿಜಾ ಮಾಣಿಗೋಪಾಲ್, ಕೋಶಾಧಿಕಾರಿ ವಿನಯ್ ಪೂಜಾರಿ ಬನ್ನಾಡಿ ಮತ್ತಿತರರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಯೋಗೇಶ್ ಪೂಜಾರಿ ಕೋಡಿ ಪ್ರಸ್ತಾವಿಸಿದರು. ಶಿಕ್ಷಕ ಸತೀಶ್ ವಡ್ಡರ್ಸೆ ಕಾರ್ಯಕ್ರಮ ನಿರೂಪಿಸಿದರು.

ಸಾಧಕರಿಗೆ ಸನ್ಮಾನ

ಬೆಂಗಳೂರು ದಯಾನಂದ ಸಾಗರ್ ವಿವಿ ಸಹಾಯಕ ಪ್ರಾಧ್ಯಾಪಕಿ ಡಾ.ಗಾಯತ್ರಿ, ಪತ್ರಕರ್ತ ಅಶೋಕ ಪುತ್ತೂರು, ವ್ಯಂಗ್ಯ ಚಿತ್ರಗಾರರಾದ ಕೇಶವ ಸಸಿಹಿತ್ಲು, ಚಂದ್ರ ಎಸ್.ಪೂಜಾರಿ, ಕೃಷಿಕರಾದ ರಾಜೇಂದ್ರ ಪೂಜಾರಿ ಬೆಚ್ಚಳ್ಳಿ, ರಾಮ ಪೂಜಾರಿ ಮುಲ್ಲಿಮನೆ, ಎ.ಭಾಸ್ಕರ ಪೂಜಾರಿ ನಡೂರು, ಸಮಾಜ ಸೇವಕರಾದ ಕೋಟಿ ಪೂಜಾರಿ, ಮಮತಾ, ಸಿಎ ರಕ್ಷಿತ್ ಕರ್ಕುಂಜೆ, ನಾಗರಾಜ್ ಹೊಳ್ಮಗೆ, ವೈಷ್ಣವಿ ಎಂ.ವಿ., ಅಕ್ಷಯ ಪೂಜಾರಿ ಕೋಣಿ, ವಿಶೇಷ ಚೇತನ ರಾಜು ಪೂಜಾರಿ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net