

ಬಂಟ್ವಾಳ: ವಟಪುರ ಕ್ಷೇತ್ರ ಖ್ಯಾತಿಯ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ಬೆಳಗ್ಗೆ 23ನೇ ವರ್ಷದ ಶ್ರೀವಿಶ್ವರೂಪದರ್ಶನ ಕಾರ್ಯಕ್ರಮ ನಡೆಯಿತು.
ಬೆಳಗ್ಗೆ ಕಾಕಡಾರತಿ, ಜಾಗರ ಪೂಜೆ ನಂತರ ವಿಶೇಷಾಲಂಕಾರ ಮಾಡಲಾಯಿತು. ಪ್ರಸಾದ ವಿತರಣೆ, ಭಜನೆ ಜರುಗಿತು. ಉದ್ಯಮಿ ಅಜಿತ್ ಪೈ ವಿಶೇಷ ಸೇವಾದಾರರಾಗಿದ್ದರು. ಬಂಟ್ವಾಳ ಕೆನರಾ ಬ್ಯಾಂಕ್ ವಿಶೇಷ ಸಹಕಾರ ನೀಡಿತು. ಆಡಳಿತ ಸಮಿತಿ ಸದಸ್ಯರು, ಭಕ್ತರು ಉಪಸ್ಥಿತರಿದ್ದರು.