ಮೂಡುಗಣಪತಿ ದೇವಳದಲ್ಲಿ ವಿಷ್ಣುಹವನ

byn (1)
Published on

ಬೈಂದೂರು: ಶ್ರೀ ಸಂಸ್ಥಾನ ಕಾಶೀಮಠಾಧೀಶರಾದ ಶ್ರೀಮದ್ ಸುಧೀಂದ್ರ ತೀರ್ಥರ ಜನ್ಮಶತಾಬ್ದಿ ಮಹೋತ್ಸವ ಅಂಗವಾಗಿ ಹರಿದ್ವಾರ ಕ್ಷೇತ್ರದ ವ್ಯಾಸಾಶ್ರಮದಲ್ಲಿನ ವೃಂದಾವನದಿಂದ ಹೊರಟ ಶ್ರೀ ಗುರುಗಳ ಸ್ವರ್ಣಪಾದುಕಾ ಯಾತ್ರೆ ಮಂಗಳವಾರ ಸಂಜೆ ಉಪ್ಪುಂದ ಶ್ರೀ ಅಶ್ವತ್ಥನಾರಾಯಣ ಮೂಡುಗಣಪತಿ ದೇವಾಲಯಕ್ಕೆ ಆಗಮಿಸಿದ್ದು, ಪಾದುಕೆಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು.

ಮುಖ್ಯ ಅರ್ಚಕ ಅವಧಾನಿ ಯು.ಗಣೇಶ ಬಾಬು ಭಟ್ ನೇತೃತ್ವದಲ್ಲಿ ಅಂಗಾರಕ ಸಂಕಷ್ಟಹರ ಚತುರ್ಥಿ ಪ್ರಯುಕ್ತ ಶ್ರೀ ಮೂಡುಗಣಪತಿ ದೇವರಿಗೆ ಸಂಕಷ್ಟಿ ಪೂಜಾ ಸೇವೆ, ರಜತ ತೊಟ್ಟಿಲೋತ್ಸವ, ಭಜನಾ ಸಂಕೀರ್ತನೆ ನಡೆಯಿತು. ಬುಧವಾರ ಸ್ವರ್ಣ ಪಾದುಕೆ ಸನ್ನಿಧಿಯಲ್ಲಿ ಯು.ರಾಜೀವ ಭಟ್ ಯಜವಾನಿಕೆಯಲ್ಲಿ ಲು ವಿಷ್ಣುಹವನ, ಪೂರ್ಣಾಹುತಿ, ಗುರು ಪಾದುಕಾ ಪೂಜೆ, ಬ್ರಾಹ್ಮಣ ಸಂತರ್ಪಣೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net