ಕಾಲಿಟ್ಟಲ್ಲೆಲ್ಲ ಕೆಸರು, ಶವ ಸಾಗಿಸಲೂ ಪರದಾಟ; ಅದರಲ್ಲೇ ಪಾರ್ಥಿವ ಶರೀರ ಎತ್ತಿಕೊಂಡು ಸಾಗಿದ ಗ್ರಾಮಸ್ಥರು..

Mud
Published on

ಗದಗ: ತೀರಾ ತುರ್ತು ಪರಿಸ್ಥಿತಿಯಲ್ಲಿ ಇದ್ದಾಗ ಆ್ಯಂಬುಲೆನ್ಸ್ ಸಿಗದ, ಶವ ಸಾಗಿಸಲೂ ವಾಹನ ಸಿಗದ ಪ್ರಕರಣಗಳು ಸಾಕಷ್ಟು ವರದಿಯಾಗಿದೆ. ಇಲ್ಲೊಂದು ಕಡೆ ಅಂಥದ್ದೇ ಒಂದು ಪ್ರಕರಣ ನಡೆದಿದ್ದು, ಶವ ಸಾಗಿಸಲು ಕೆಸರಲ್ಲೇ ಪರದಾಡಿಕೊಂಡು ಸಾಗಿದ್ದು ಕಂಡುಬಂದಿದೆ.

ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಹಳ್ಳಿಕೇರಿ ಗ್ರಾಮದಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ. ಕರಿಯಪ್ಪ ಮಾಯನ್ನವರ (60) ವರ್ಷ ಅವರ ಶವ ತರಲು ಹೀಗೊಂದು ಪರದಾಟ ನಡೆಸಬೇಕಾದ ಪ್ರಸಂಗ ಎದುರಾಗಿತ್ತು.

ಜಮೀನಿಗೆ ಹೋಗಿದ್ದಾಗ ಕರಿಯಪ್ಪ ಸಾವಿಗೀಡಾಗಿದ್ದು, ಅದನ್ನು ಅಲ್ಲಿಂದ ತೆಗೆದುಕೊಂಡು ಬರುವ ದಾರಿಯ ತಗ್ಗಿನಲ್ಲಿ ಕೆಸರು ತುಂಬಿಕೊಂಡಿದ್ದು, ಗ್ರಾಮಸ್ಥರು ಆ ಕೆಸರಲ್ಲೇ ಕಷ್ಟಪಟ್ಟು ಪಾರ್ಥಿವ ಶರೀರ ಸಾಗಿಸುವಂತಾಗಿತ್ತು. ಹಳ್ಳದ ರಸ್ತೆಯನ್ನು ದುರಸ್ತಿ ಮಾಡಬೇಕು ಎಂದು ಗ್ರಾಮಸ್ಥರ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net