ಗ್ರಾಮ ಪಂಚಾಯಿತಿ ಸದಸ್ಯ ನಾಪತ್ತೆ: ಸೇತುವೆ ಮೇಲಿನ ನೀರಿನಲ್ಲಿ ಬೈಕ್ ಸಮೇತ ಕೊಚ್ಚಿ ಹೋದ ಗಂಗಾಧರ್

Navilugurki
Published on

ಚಿಕ್ಕಬಳ್ಳಾಪುರ: ಜಿಲ್ಲೆಯಾದ್ಯಂತ ಮಳೆ ಆರ್ಭಟ ತೀವ್ರಗೊಂಡಿದ್ದು, ಗ್ರಾಮ ಪಂಚಾಯತಿ ಸದಸ್ಯರೊಬ್ಬರು ಬೈಕ್ ಸಮೇತ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕಿನ ರಾಮಪಟ್ಟಣ-ನವಿಲುಗರ್ಕಿ ಗ್ರಾಮಗಳ ಮಧ್ಯೆ ಈ ಘಟನೆ ನಡೆದಿದೆ. ನವಿಲುಗುರ್ಕಿ ಗ್ರಾಮ ಪಂಚಾಯತಿ ಸದಸ್ಯ ಗಂಗಾಧರ್ (45) ನೀರಿನಲ್ಲಿ ಕೊಚ್ಚಿಕೊಂಡು ಹೋದ ದುರ್ದೈವಿ.

ಗಂಗಾಧರ್ ಅವರು ಇಂದು ಬೈಕ್‌ನಲ್ಲಿ ರಾಮಪಟ್ಟಣದಿಂದ ಸ್ವಗ್ರಾಮ ನವಿಲುಗರ್ಕಿಗೆ ತೆರಳುವಾಗ ಈ ಅವಘಡ ಸಂಭವಿಸಿದೆ. ಸೇತುವೆ ಮೇಲೆ ಹರಿಯುತ್ತಿದ್ದ ನೀರಿನಲ್ಲೇ ಅವರು ಬೈಕ್ ಚಲಾಯಿಸಿಕೊಂಡು ಹೋಗಿದ್ದರು.

ಸೇತುವೆ ಮೇಲೆ ನೀರಿನ ಸೆಳೆತಕ್ಕೆ ಸಿಲುಕಿದ ಅವರು ಆಯತಪ್ಪಿ ಬೈಕ್ ಜೊತೆಗೇ ಕೊಚ್ಚಿಕೊಂಡು ಹೋಗಿದ್ದಾರೆ. ಸೇತುವೆಗೆ ಸಮೀಪದಲ್ಲೇ ಬೈಕ್ ಪತ್ತೆಯಾಗಿದ್ದು, ಗಂಗಾಧರ್ ಕಾಣಿಸದಿರುವುದು ಆತಂಕ ಮೂಡಿಸಿದೆ. ಗುಡಿಬಂಡೆ‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಗಂಗಾಧರ್ ಪತ್ತೆ ಕಾರ್ಯಾಚರಣೆಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net