ರವಿ ಬೆಳಗೆರೆ ಇಲ್ಲದೆ ಒಂದು ವರ್ಷ: ಗೆಲುವೇ.. ನಿಜ್ಜ ಪ್ರೀತಿಸ್ತೀಯಾ..?

Untitled-1
Published on

ಬೆಂಗಳೂರು: ಖ್ಯಾತ ಪತ್ರಕರ್ತ, ಕಥೆಗಾರ, ಅಂಕಣಕಾರ ರವಿ ಬೆಳಗೆರೆ ತನ್ನ ಅಸಂಖ್ಯಾತ ಅಭಿಮಾನಿಗಳನ್ನು ಅಗಲಿ ನ. 13ಕ್ಕೆ ಭರ್ತಿ ಒಂದು ವರ್ಷ. ಈ ಹಿನ್ನೆಲೆಯಲ್ಲಿ ಅವರ ಕುಟುಂಬ ವರ್ಗದವರು ಇದೇ ನ. 13ರಂದು ರವಿ ಬೆಳಗೆರೆ ಅವರ ಮೊದಲ ಪುಣ್ಯಸ್ಮರಣೆಯನ್ನು ಹಮ್ಮಿಕೊಂಡಿದ್ದಾರೆ.

ತನ್ನ ನೆಚ್ಚಿನ ಲೇಖಕ ರವಿ ಬೆಳಗೆರೆಯ ಅಗಲಿಕೆಯನ್ನು ಮಿಸ್ ಮಾಡಿಕೊಳ್ಳುತ್ತಿರುವ ಅಭಿಮಾನಿಗಳಿಗೆ ಇದೇ ಸಂದರ್ಭದಲ್ಲಿ ರವಿ ಬೆಳಗೆರೆಯ ಮಾತು ಕೇಳಿಸುವ, ಬರಹ ಓದಿಸುವ ಪ್ರಯತ್ನವನ್ನೂ ಅವರ ಕುಟುಂಬ ಆಯೋಜಿಸಿದೆ. ಮೊದಲ ಪುಣ್ಯಸ್ಮರಣೆಯ ಕಾರ್ಯಕ್ರಮ ಬೆಂಗಳೂರಿನ ಪದ್ಮನಾಭನಗರದಲ್ಲಿರುವ ಹಾಯ್ ಬೆಂಗಳೂರ್ ಕಚೇರಿಯಲ್ಲಿ ಶನಿವಾರ ಸಂಜೆ 4.30ಕ್ಕೆ ನಡೆಯಲಿದೆ. ಆಸಕ್ತರು ಬೆಳಗ್ಗೆ 11ರಿಂದ ಸಂಜೆ 6ರ ವರೆಗೆ ಯಾವುದೇ ಸಮಯದಲ್ಲೂ ಬರಬಹುದು ಎಂದು ರವಿ ಬೆಳಗೆರೆ ಪುತ್ರಿ ಚೇತನಾ ಬೆಳಗೆರೆ ತಿಳಿಸಿದ್ದಾರೆ.

ಈ ಸಮಾರಂಭದಲ್ಲಿ ರವಿ ಬೆಳಗೆರೆ ಅವರ ಜೀವನೋತ್ಸಾಹದ ಮಾತುಗಳನ್ನು ಒಳಗೊಂಡಿರುವ 'ಗೆಲುವೇ.. ಐ ಲವ್ ಯೂ' ಆಡಿಯೋ ಸಿಡಿ ಬಿಡುಗಡೆ ಆಗಲಿದೆ. ಜತೆಗೆ ಬೆಳಗೆರೆ ಬರೆದಿರುವ 'ಪ್ರದೋಷ' ಹಾಗೂ 'ನಿಜ್ಜ ಪ್ರೀತಿಸ್ತೀಯಾ..' ಎಂಬ ಎರಡು ಪುಸ್ತಕಗಳೂ ಬಿಡುಗಡೆ ಆಗಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net