ನೀವು ಹೇಳಿದ್ರೆ ಆಗುತ್ತೆ, ಅಧ್ಯಕ್ಷ ಸ್ಥಾನ ಕೊಡಿಸಿ ಸರ್​... ಎನ್ನುತ್ತ ಸಿದ್ದು ಕಾಲಿಗೆ ಬಿದ್ದ ಮಾಜಿ ಶಾಸಕ

Kashappanavar- Siddaramaiah
Published on

ಬಾಗಲಕೋಟೆ: ನಿಮ್ಮ ಆಶೀರ್ವಾದ ಬೇಕು ಸರ್... ಎನ್ನುತ್ತ ಮಾಜಿ ಸಿಎಂ ಕಾಲಿಗೆ ಬಿದ್ದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್, ನನಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನ ಕೊಡಿಸಿ ಎಂದು ಕೋರಿದರು.

ಬಾದಾಮಿಯ ಖಾಸಗಿ ಹೋಟೆಲ್​ ಬಳಿ ಸೋಮವಾರ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಬೆಂಬಲಿಗರ ಜೊತೆ ಕಾಶಪ್ಪನವರ್ ಭೇಟಿ ಮಾಡಿದರು. ಈ ವೇಳೆ ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸ್ಥಾನವನ್ನು ಕಾಶಪ್ಪನವರ್​ಗೆ ಕೊಡಿಸಬೇಕು. ನೀವು ಹೇಳಿದ್ರೆ ಆಗುತ್ತೆ ಸರ್​ ಎನ್ನುತ್ತ ಅಭಿಮಾನಿಗಳು ಕೈ ಮುಗಿದು ಕೇಳಿಕೊಂಡರು.

ನನ್ನ ಆಶೀರ್ವಾದ ಯಾವಾಗಲೂ ಇರುತ್ತೆ ಎಂದು ಕಾಶಪ್ಪನವರ್​ರ ಬೆನ್ನು ತಟ್ಟಿದ ಸಿದ್ದರಾಮಯ್ಯ, ನಾನು ಸಹಕಾರಿ ಕ್ಷೇತ್ರಕ್ಕೆ ಈವರೆಗೂ ಕೈಹಾಕಿಲ್ಲ. ನಾನು ಹೇಳೋದು ಹೇಳ್ತೇನೆ ಎಂದರು.

ನಾನು ಯಾವಾಗಲೂ ಇವನ(ಕಾಶಪ್ಪನವರ್) ಪರವಾಗಿಯೇ ಇರೋದು ಎಂದ ಸಿದ್ದರಾಮಯ್ಯ, ಕಾಶಪ್ಪನವರ್​ರ ಬೆಂಬಲಿಗರಿಗೆ ಅಭಯ ನೀಡಿದರು. ಇತ್ತೀಚಿಗೆ ನಡೆದ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಸಮಬಲ ಹೋರಾಟದಲ್ಲಿ ಕಾಶಪ್ಪನವರ್​ರ ಲಾಟರಿ ಮೂಲಕ ರೋಚಕ ಗೆಲುವು ಪಡೆದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net