ಉಪ್ಪಿನಂಗಡಿಯಲ್ಲಿ ಹರ್ಷಾಚರಣೆ

vijayostva
ಉಪ್ಪಿನಂಗಡಿಯಲ್ಲಿ ವಿಜಯೋತ್ಸವದ ಮೆರವಣಿಗೆ ನಡೆಯಿತು. ಎನ್.ಉಮೇಶ್ ಶೆಣೈ, ಚಂದಪ್ಪ ಮೂಲ್ಯ, ರಾಮಚಂದ್ರ ಪೂಜಾರಿ ಕೋಡಿಂಬಾಡಿ ಮೊದಲಾದವರಿದ್ದರು.
Published on

ಉಪ್ಪಿನಂಗಡಿ: ದ.ಕ. ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಜಯಗಳಿಸಿದ ಹಾಗೂ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಬಹುಮತ ಗಳಿಸಿದ ಹಿನ್ನೆಲೆಯಲ್ಲಿ ಉಪ್ಪಿನಂಗಡಿಯಲ್ಲಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಮೆರವಣಿಗೆ ನಡೆಸಿದರು.

ಶ್ರೀ ಸಹಸ್ರಲಿಂಗೇಶ್ವರ-ಮಹಾಕಾಳಿ ದೇವಾಲಯದ ವಠಾರದಿಂದ ಹೊರಟ ಮೆರವಣಿಗೆ ಉಪ್ಪಿನಂಗಡಿ ಬಸ್‌ನಿಲ್ದಾಣದ ಬಳಿ ತಲುಪುತ್ತಿದ್ದಂತೆಯೇ ಪಟಾಕಿ ಸಿಡಿಸಿ, ಹಣ್ಣುಗಳನ್ನು ವಿತರಿಸಿ ಸಂಭ್ರಮಿಸಲಾಯಿತು. ವಿಜಯೋತ್ಸವದಲ್ಲಿ ಪ್ರಮುಖರಾದ ಎನ್.ಉಮೇಶ್ ಶೆಣೈ, ಚಂದಪ್ಪ ಮೂಲ್ಯ, ರಾಮಚಂದ್ರ ಪೂಜಾರಿ ಕೋಡಿಂಬಾಡಿ, ಯತೀಶ್ ಶೆಟ್ಟಿ, ಸಂತೋಷ್ ಕುಮಾರ್ ಪಂರ್ದಾಜೆ, ಸುದರ್ಶನ್, ಚಿದಾನಂದ ಪಂಚೇರು, ಶೋಭಾ ದಯಾನಂದ್, ಉಷಾಚಂದ್ರ ಮುಳಿಯ, ಶ್ಯಾಮಲಾ ಶೆಣೈ, ವಿದ್ಯಾಧರ ಜೈನ್, ಧನಂಜಯ ನಟ್ಟಿಬೈಲ್, ರವಿನಂದನ್, ಹರಿರಾಮಚಂದ್ರ, ಪ್ರಶಾಂತ್ ಪೆರಿಯಡ್ಕ, ಹರೀಶ್ ಪಟ್ಲ, ಪ್ರಭಾಕರ ಬಂಡಾರಿ, ಮಹೇಶ್ ಬಜತ್ತೂರು, ಆದೇಶ್ ಶೆಟ್ಟಿ, ಮಹೇಶ್ ಬಜತ್ತೂರು, ಲೋಕೇಶ್ ಬೆತ್ತೋಡಿ, ಪ್ರಸಾದ್ ಭಂಡಾರಿ, ಕಾರ್ತಿಕ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net