ದ.ಕ. ಬಿಜೆಪಿ ಯ ಕ್ಯಾಪ್ಟನ್ ಬ್ರಿಜೇಶ್ ಚೌಟ 50,453 ಮತಗಳ ಮುನ್ನಡೆ

chowta
Published on


ಮಂಗಳೂರು; ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಐದನೇ ಸುತ್ತಿನ ಮತ ಎಣಿಕೆ ಮುಗಿದಿದ್ದು ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ 50,453 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.


ಬಿಜೆಪಿ ಚುನಾವಣಾ ಕಚೇರಿಯಲ್ಲಿ ಬೃಹತ್ ಟಿವಿ ಪರದೆ ಹಾಕಿ ಚುನಾವಣಾ ಫಲಿತಾಂಶ ವೀಕ್ಷಣೆಗ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಪದಾಧಿಕಾರಿಗಳಾದ ನಿತಿನ್ ಕುಮಾರ್, ಯತೀಶ್ ಆರ್ವಾರ, ಸಂಜಯ ಪ್ರಭು ಮೊದಲಾದವರು ಫಲಿತಾಂಶ ವೀಕ್ಷಣೆ ಮಾಡುತ್ತಿದ್ದಾರೆ.


ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲೂ ನಾಯಕರಾದ ಹರೀಶ್ ಕುಮಾರ್,ಡಾ.ಮಂಜುನಾಥ ಭಂಡಾರಿ ಮೊದಲಾದವರು ಫಲಿತಾಂಶ ವೀಕ್ಷಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net