ಭದ್ರಾ ಹೋಂ ಅಪ್ಲಾಯನ್ಸಸ್‌ನಲ್ಲಿ ವಿಜಯೋತ್ಸವ

badra
Published on

ಬಂಟ್ವಾಳ: ತಾಲೂಕಿನಾದ್ಯಂತ ಜನಪ್ರಿಯತೆಯನ್ನು ಪಡೆದುಕೊಂಡಿರುವ ಗೃಹಪಯೋಗಿ ವಸ್ತುಗಳ ಬೃಹತ್ ಮಾರಾಟ ಮಳಿಗೆ ಭದ್ರಾ ಹೋಂ ಅಪ್ಲಾಯನ್ಸಸ್ ನವರಾತ್ರಿ ಮತ್ತು ದೀಪಾವಳಿ ಬಂಪರ್ ಸೇಲ್ ಮೂಲಕ ಜನಾಕರ್ಷಣೆ ಗಳಿಸುತ್ತಿದೆ. ಇದರ ಜತೆ ವಿಜಯವಾಣಿ ವಿಜಯೋತ್ಸವದ ಮೂಲಕ ಅದೃಷ್ಟ ಚೀಟಿಯ ಅದೃಷ್ಟ ಗ್ರಾಹಕರಾಗಬಹುದು.

ಭದ್ರಾ ಸಮೂಹ ಸಂಸ್ಥೆಗಳ ಪ್ರವರ್ತಕ ಮಂಜುನಾಥ ಆಚಾರ್ಯ ಮತ್ತು ಮೇಘಾ ಆಚಾರ್ಯ ಅವರ ಮಾಲಕತ್ವದಲ್ಲಿ ಬಂಟ್ವಾಳ ಬಸ್ತಿಪಡ್ಪುವಿನಲ್ಲಿ ಅಗ್ನಿಶಾಮಕ ಠಾಣೆಯ ಮುಂಭಾಗ ಭದ್ರಾ ಹೋಂ ಅಪ್ಲಾಯನ್ಸ್ ಪ್ರಧಾನ ಕಚೇರಿ ಹಾಗೂ ಶೋರೂಂ ಕಾರ್ಯ ನಿರ್ವಹಿಸುತ್ತಿದ್ದು, ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುವ ಮೂಲಕ ಅತ್ಯಂತ ಕಡಿಮೆ ಅವಧಿಯಲ್ಲಿ ತಾಲೂಕಿನಾದ್ಯಂತ ಮನೆಮಾತಾಗಿದೆ. ಬಿ.ಸಿ.ರೋಡಿನ ಸೋಮಯಾಜಿ ಹೌಸ್‌ನಲ್ಲಿ ಪ್ರಥಮ ಶಾಖೆ ಆರಂಭಗೊಂಡ ಕೆಲ ದಿನಗಳಲ್ಲೇ ಜನಪ್ರಿಯಗೊಂಡಿತ್ತು. ಈಗ ಮಡಂತ್ಯಾರಿನ ಪರಿಶ್ರಮ ಕಟ್ಟಡದಲ್ಲಿ ಎರಡನೇ ಶಾಖೆ ಆರಂಭಿಸಿದ್ದು, ಜನಾಕರ್ಷಣೆ ಪಡೆಯುತ್ತಿದೆ. ಗುಣಮಟ್ಟದ ವಸ್ತುಗಳ ಮಾರಾಟ ಹಾಗೂ ನಗುಮೊಗದ ಸೇವೆಯಿಂದಾಗಿ ಸಂಸ್ಥೆ ಹೆಚ್ಚು ಜನಪ್ರಿಯತೆ ಪಡೆದುಕೊಂಡು ಜನರಿಗೆ ಇನ್ನಷ್ಟು ಹತ್ತಿರವಾಗಿದೆ. ಎಲ್ಲ ಕಂಪನಿಗಳ, ಎಲ್ಲ ಬಗೆಯ ಎಲೆಕ್ಟ್ರಾನಿಕ್ಸ್ ವಸ್ತುಗಳು, ಫರ್ನಿಚರ್‌ಗಳು ಹಾಗೂ ಹಾಗೂ ಗೃಹಪಯೋಗಿ ವಸ್ತುಗಳು ಇಲ್ಲಿ ಲಭ್ಯವಿವೆ. ಬಸ್ತಿಪಡ್ಪುವಿನಲ್ಲಿ ಬೃಹತ್ ಶೋ ರೂಂ ಇದ್ದು ಮನೆಗೆ ಬೇಕಾಗುವ ಎಲ್ಲ ವಸ್ತುಗಳು ಒಂದೇ ಸೂರಿನಡಿ ಲಭ್ಯವಿವೆ. ಅತ್ಯಮೋಘ ಆಫರ್‌ಗಳು, ಎಕ್ಸ್‌ಚೇಂಜ್ ಆಫರ್‌ಗಳು, ಇಎಂಐ ಮೇಳ, ಪ್ರತಿ ಖರೀದಿಗೂ ಉಚಿತ ಉಡುಗೊರೆ ಇದ್ದು, ಸಂಸ್ಥೆ ಗ್ರಾಹಕರಿಗೆ ಒದಗಿಸಿರುವ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಸಂಸ್ಥೆಯ ಮಾಲಕಿ ಮೇಘಾ ಆಚಾರ್ಯ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net