

ಬ್ರಹ್ಮಾವರ: ಸೇನೆ ಮತ್ತು ಯೋಧರ ಕುರಿತು ಮಾತನಾಡುವ ಬದಲು ನಮ್ಮ ವಿದ್ಯಾರ್ಥಿಗಳಿಗೆ ದೇಶ ಪ್ರೇಮ ಮತ್ತು ಸೈನಿಕರ ಕುರಿತು ನಿಜವಾದ ಅರ್ಥ ಕಲ್ಪಿಸಲು ಈ ಕಾರ್ಯಕ್ರಮ ಸಹಕಾರಿ ಎಂದು ಎನ್ನೆಸ್ಸೆಸ್ ಘಟಕದ ಸವಿತಾ ಎರ್ಮಾಳ್ ಹೇಳಿದರು.
ಕಾರ್ಗಿಲ್ ವಿಜಯ ದಿವಸ್ 25ನೇ ವರ್ಷದ ಅಂಗವಾಗಿ ಬ್ರಹ್ಮಾವರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎನ್ನೆಸ್ಸೆಸ್ ಘಟಕ ಮತ್ತು ಸಂಘ ಸಂಸ್ಥೆಯವರ ಸಹಕಾರದಿಂದ ನಿವೃತ್ತ 45 ಸೇನಾನಿಗಳಿಗೆ ಗೌರವಾರ್ಪಣೆಯಲ್ಲಿ ಮಾತನಾಡಿದರು.
ಪ್ರಾಂಶುಪಾಲ ರವೀಂದ್ರ ಉಪಾಧ್ಯಾಯ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸೈನಿಕ ಸಂಘದ ಚಂದ್ರ ಅಮೀನ್, ಕೇಶವ ಮಲ್ಪೆ, ಉದ್ಯಮಿ ರಾಜೇಶ್ ಶೆಟ್ಟಿ ಬಿರ್ತಿ, ವಾರಂಬಳ್ಳಿ ಗ್ರಾಪಂ ಅಧ್ಯಕ್ಷ ನಿತ್ಯಾನಂದ ಬಿ.ಆರ್., ಪಾಲಕರ ಸಂಘದ ಪ್ರಕಾಶ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿಗಾರ್, ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಉಮಾ, ಸೈನಿಕ ಬಾಲಕೃಷ್ಣ ಉಪಸ್ಥಿತರಿದ್ದರು.