

ಪಡುಬಿದ್ರಿ: ಕುಡಿಯುವ ನೀರಿನ ಪೈಪ್ ದುರಸ್ತಿ ಕಾರಣಕ್ಕಾಗಿ ಪಡುಬಿದ್ರಿ ಗ್ರಾಪಂ ವ್ಯಾಪ್ತಿಯ ಅಬ್ಬೇಡಿ ಸಂಪರ್ಕ ರಸ್ತೆಯ ಕೆರೆತಕಾಡು ಮದಗ ತಿರುವಿನಲ್ಲಿ ಅಗೆದ ಹೊಂಡ ವಾಹನ ಸಂಚಾರಕ್ಕೆ ಅಪಾಯ ತಂದೊಡ್ಡಿದೆ. ವಾರದ ಹಿಂದೆಯಷ್ಟೇ ಈ ಭಾಗದಲ್ಲಿ ಹೊಂಡ ಅಗೆದು ಪೈಪ್‌ಲೈನ್ ಸರಿಪಡಿಸಲಾಗಿತ್ತು. ಬಳಿಕ ಹೊಂಡವನ್ನು ಮುಚ್ಚದೇ ಗ್ರಾಮ ಪಂಚಾಯಿತಿ ನಿರ್ಲಕ್ಷ ವಹಿಸಿದೆ. ಹೊಂಡಗಳಲ್ಲಿ ನೀರು ತುಂಬಿ ಅಪಘಾತದ ಭೀತಿ ಎದುರಾಗಿದ್ದು, ಜತೆಗೆ ಪದೇ ಪದೆ ರಸ್ತೆಯನ್ನು ಅಗೆಯಲಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.