

ಕೋಟ: ಕರಕುಶಲತೆಯನ್ನು ಹವ್ಯಾಸವಾಗಿ ಬೆಳೆಸಿಕೊಳ್ಳಿ ಮತ್ತು ಈ ಕೌಶಲತೆ ಭಾರತದಲ್ಲಿ ನಮ್ಮ ಮಹಿಳೆಯರಿಗೆ ದೇವರು ನೀಡಿದ ವರದಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ತಮ್ಮ ಬಿಡುವಿನ ಸಮಯದಲ್ಲಿ ಹವ್ಯಾಸವಾಗಿ ಮೈಗೂಡಿಸಿಕೊಳ್ಳಿ ಎಂದು ಸಾಸ್ತಾನ ಮಹಿಳಾ ಮಂಡಲ ಕಾರ್ಯದರ್ಶಿ ಜಾನೇಶ್ವರಿ ಉಡುಪ ಹೇಳಿದರು.
ಪಾಂಡೇಶ್ವರ ಗ್ರಾಪಂ ಸಭಾಂಗಣದಲ್ಲಿ ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ಸಾರಥ್ಯದಲ್ಲಿ ಮಹಿಳಾ ಮಂಡಲ ಸಾಸ್ತಾನ ಪಾಂಡೇಶ್ವರ ಮತ್ತು ಸ್ನೇಹ ಸಂಜೀವಿನಿ ಒಕ್ಕೂಟ ಸಹಯೋಗದೊಂದಿಗೆ ಕೌಶಲ ತರಬೇತಿ ಹಳೇ ಸೀರೆಗಳಿಂದ ಮ್ಯಾಟ್ ತಯಾರಿಕೆ ತರಬೇತಿ ಕಾರ್ಯಾಗಾರ ಇತ್ತೀಚೆಗೆ ತರಬೇತುದಾರರಾಗಿ ಮಾತನಾಡಿದರು.
ಜಾನೇಶ್ವರಿ ಉಡುಪ ಅವರನ್ನು ಗೌರವಿಸಲಾಯಿತು. ರೋಟರಿ ಕಾರ್ಯದರ್ಶಿ ಸುಲತಾ ಎಸ್.ಹೆಗ್ಡೆ, ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ಅಧ್ಯಕ್ಷೆ ಲೀಲಾವತಿ ಗಂಗಾಧರ್ ಪೂಜಾರಿ, ರೋಟರಿ ಜತೆ ಕಾರ್ಯದರ್ಶಿ ಅಶೋಕ್ ಕುಮಾರ್, ರೋಟರಿ ಸಂಸ್ಥೆ ಹಿರಿಯ ಸದಸ್ಯೆ ರತ್ನ ಜೆ.ರಾಜ್, ಸಂಜೀವಿನಿ ಒಕ್ಕೂಟ ಸದಸ್ಯರು, ಮಹಿಳಾ ಮಂಡಲ ಪದಾಧಿಕಾರಿಗಳು ಉಪಸ್ಥಿತರಿದ್ದರು. ಮಹಿಳಾ ಮಂಡಲ ಸಾಸ್ತಾನ ಪಾಂಡೇಶ್ವರ ಅಧ್ಯಕ್ಷೆ ಸುಮಿತ್ರಾ ಸುಧಾಕರ ಸ್ವಾಗತಿಸಿದರು. ಸಂಜೀವಿನಿ ಒಕ್ಕೂಟದ ಕಾರ್ಯದರ್ಶಿ ಉಷಾ ಕಾರ್ಯಕ್ರಮ ನಿರೂಪಿಸಿದರು.