ಟಯರ್​ ಬ್ಲಾಸ್ಟ್​ ಆಗಿ ಪಲ್ಟಿಯಾದ ಟಾಟಾ ಸುಮೋ; ಇಬ್ಬರು ಸ್ಥಳದಲ್ಲೇ ಸಾವು; ಒಂದೇ ಕುಟುಂಬದ 15 ಮಂದಿ ಇದ್ದ ವಾಹನ!?

Untitled-1
Published on

ನೆಲಮಂಗಲ: ಒಂದೇ ಕುಟುಂಬದ ಸುಮಾರು ಹದಿನೈದು ಮಂದಿ ಇದ್ದ ಟಾಟಾ ಸುಮೋ ವಾಹನದ ಟಯರ್ ಬ್ಲಾಸ್ಟ್ ಆಗಿ, ವಾಹನ ಪಲ್ಟಿಯಾಗಿದ್ದು, ಇಬ್ಬರು ಪ್ರಯಾಣಿಕರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ರಾಷ್ಟ್ರೀಯ ಹೆದ್ದಾರಿ-4ರ ತುಮಕೂರು ರಸ್ತೆಯಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ.

ಒಂದೇ ಕುಟುಂಬದ ಹತ್ತಕ್ಕೂ ಅಧಿಕ ಮಂದಿ ಇದ್ದ ಟಾಟಾ ಸುಮೋ ನೆಲಮಂಗಲದ ದಾಬಸ್​ ಪೇಟೆ ಮೇಲ್ಸೇತುವೆಯಲ್ಲಿ ಹೋಗುತ್ತಿರುವಾಗ ಅದರ ಟಯರ್​ ಬ್ಲಾಸ್ಟ್ ಆಗಿದೆ. ಪರಿಣಾಮವಾಗಿ ನಿಯಂತ್ರಣಕ್ಕೆ ಸಿಗದ ಸುಮೋ ಪಲ್ಟಿಯಾಗಿದೆ.

ಕೊಪ್ಪಳ ಮೂಲದ ಮೊಹಮದ್ ಸಾಬ್​ (65) ಮತ್ತು ಮೊಹಮದ್ ಯೂಸುಫ್​ (7) ಮೃತಪಟ್ಟವರು. ಇವರು ಬೆಂಗಳೂರಿನಿಂದ ವಾಪಸ್ ಜಾವಗಲ್ ಸಮೀಪದ ದರ್ಗಾಗೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ನೆಲಮಂಗಲ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗಾಯಾಳುಗಳನ್ನು ನೆಲಮಂಗಲ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net