ರಸ್ತೆ ದಾಟಲು ದೋಣಿ ವ್ಯವಸ್ಥೆಯಾಗಲಿ! Road

ಭಟ್ಕಳ ಪಟ್ಟಣದ (Road) ಹೆದ್ದಾರಿ ಬದಿಯ ಜಯರಾಮ ಶ್ಯಾನಭಾಗ ಅವರ ಮನೆಯ ಎದುರು ಕೃತಕ ನಾಲೆ ಸೃಷ್ಟಿಯಾಗಿದ್ದು ನೀರಿನ ದಿಗ್ಬಂದನ ಎರ್ಪಟ್ಟಿದೆ.
ಭಟ್ಕಳ ಪಟ್ಟಣದ (Road) ಹೆದ್ದಾರಿ ಬದಿಯ ಜಯರಾಮ ಶ್ಯಾನಭಾಗ ಅವರ ಮನೆಯ ಎದುರು ಕೃತಕ ನಾಲೆ ಸೃಷ್ಟಿಯಾಗಿದ್ದು ನೀರಿನ ದಿಗ್ಬಂದನ ಎರ್ಪಟ್ಟಿದೆ.
Published on
ಭಟ್ಕಳ: ತಾಲೂಕಿನಲ್ಲಿ ಭಾನುವಾರ ಮುಂಜಾನೆ ಸುರಿದಬಾರಿ ಮಳೆಗೆಜನಜೀವನ ಅಸ್ತವ್ಯಸ್ಥಗೊಂಡಿದ್ದು (Road) ಹೆದ್ದಾರಿಯ ತಗ್ಗು ಪ್ರದೇಶಗಳು ಜಲಾವೃಗೊಂಡು ವಾಹನ ಸವಾರರು ಸಂಚಾರಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾಯಿತು.
ಪಟ್ಟಣದಲ್ಲಿ ಹೆದ್ದಾರಿ ವಿಸ್ತರಣೆ ಕಾಮಗಾರಿ ವಿಸ್ತರಣೆಗಾಗಿ ಮಾಡಿಟ್ಟ ಅರೆಬರೆ ಕಾಮಗಾರಿಯಿಂದಾಗಿ ತಗ್ಗು ಪ್ರದೇಶಗಳಲ್ಲಿ ಕೃತಕ ಕೆರೆ ನಿರ್ಮಾಣವಾಗಿದೆ.
ಅಲ್ಲಿಲ್ಲಿ ಬಿದ್ದ ಗುಂಡಿಯಿಂದ ವಾಹನ ಸವಾರರು ಮುಂದೆ ದಾರಿ ಕಾಣದೆ ತೊಂದರೆ ಅನುಭವಿಸುವಂತಾಯಿತು.
ಮಳೆಗಾಲಕ್ಕೆ ತಿಂಗಳು ಬಾಕಿ ಇರುವಾಗ ಆರಂಭಿಸಿದ ತರಾತುರಿ ಕೆಲಸದಿಂದ ಇಷ್ಟೆಲ್ಲಾ ಆವಂತರವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇವಲ 2 ಗಂಟೆ ಸುರಿದ ಮಳೆಗೆ ಕೃತಕ ಕೆರೆ ಸೃಷ್ಟಿಯಾಗಿದ್ದು ಇನ್ನೂ 3 ತಿಂಗಳು ಮಳೆಗಾಲ ಕಳೆಯಲು ದೋಣಿಯ ವ್ಯವಸ್ಥೆ ಮಡುವಂತೆ ಸಾರ್ವಜನಿಕರು ತಾಲೂಕಾಡಳಿತಕ್ಕೆ ಲೇವಡಿ ಮಾಡಿದ್ದಾರೆ.
ಹೆದ್ದಾರಿ ಕಾಮಗಾರಿ ಶೀಘ್ರದಲ್ಲಿ ಪೂರ್ಣಗೊಳ್ಳದಿದ್ದರೆ ಮುಂದಿನ ಮಳೆಗಾದಲ್ಲಿ ಇದು ಇನ್ನಷ್ಟು ಬಿಗಡಾಯಿಸಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net