ಸೃಷ್ಟಿಯಲ್ಲಿ ಕುಟುಂಬ ಜೀವನ ದೇವರ ವೈಶಿಷ್ಟ್ಯ: ಹಂಝ ಮಿಸ್ಬಾಹಿ ಹೇಳಿಕೆ

ULL.MAY-11, URUS
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ದೇವನ ಸೃಷ್ಟಿಗಳಲ್ಲಿ ಮನುಷ್ಯ ವರ್ಗ ಅತ್ಯಂತ ಶ್ರೇಷ್ಠರಾಗಿದ್ದಾರೆ, ಆ ಕಾರಣದಿಂದ ಇತರ ಜೀವಿಗಳಲ್ಲಿ ಇಲ್ಲದ ಕುಟುಂಬ ಜೀವನ ಮನುಷ್ಯರದ್ದಾಗಿದೆ, ಇದು ದೇವನು ನೀಡಿದ ವೈಶಿಷ್ಟೃವಾಗಿದೆ. ಸಂಪತ್ತು, ಅಂತಸ್ತು ಎಲ್ಲ ಇದ್ದರೂ ಕುಟುಂಬ ಇಲ್ಲ ಎಂದಾದರೆ ಅಂತಹ ಜೀವನ ನಿಷ್ಟ್ರಯೋಜಕ ಎಂದು ವಾಗ್ಮಿ ಹಂಝ ಮಿಸ್ಬಾಹಿ ಓಟಪದವು ಹೇಳಿದರು.

ಉಳ್ಳಾಲ ದರ್ಗಾದ 22ನೇ ಪಂಚವಾರ್ಷಿಕ ಉರುಸ್ ಪ್ರಯುಕ್ತ ಶನಿವಾರ ಧಾರ್ಮಿಕ ಸಭೆಯಲ್ಲಿ ಇಸ್ಲಾಮಿನಲ್ಲಿ ಕುಟುಂಬ ಜೀವನ ಎನ್ನುವ ವಿಷಯದಲ್ಲಿ ಮಾತನಾಡಿದರು.

ವಿ.ಕೆ.ಅಬ್ದುಲ್ ಖಾದರ್ ಮುಸ್ಲಿಯಾರ್ ದುಆ ನೆರವೇರಿಸಿದರು. ದರ್ಗಾ ಅಧ್ಯಕ್ಷ ಬಿ.ಜಿ.ಹನೀಫ್ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ತಾಪಂ ಮಾಜಿ ಅಧ್ಯಕ್ಷ ಮಹಮ್ಮದ್ ಮೋನು ಮಲಾರ್, ಕೇಂದ್ರ ಜುಮಾ ಮಸೀದಿ ಖತೀಬ್ ಹಾಫಿಳ್ ಅಬ್ದುಲ್ ಮಜೀದ್ ಫಾಳಿಲಿ ಕಾಮಿಲ್ ಸಖಾಫಿ, ದರ್ಗಾ ಉಪಾಧ್ಯಕ್ಷ ಅಶ್ರಫ್ ಅಹ್ಮದ್ ರೈಟ್‌ವೇ, ಕಾರ್ಯದರ್ಶಿ ಮುಸ್ತಫಾ ಮದನಿನಗರ, ಕೋಶಾಧಿಕಾರಿ ನಾಝೀಮ್ ರಹ್ಮಾನ್ ಮುಕಚ್ಚೇರಿ, ಸದಸ್ಯರಾದ ಝೈನುದ್ದೀನ್ ಮೇಲಂಗಡಿ, ಅಬ್ದುಲ್ ಖಾದರ್ ಕೋಡಿ, ಯು.ಎಚ್.ಫಾರೂಕ್, ಮಾಜಿ ಅಧ್ಯಕ್ಷ ಯು.ಕಣಚೂರು ಮೋನು, ಹಳೆಕೋಟೆ ಮಸೀದಿ ಖತೀಬ್ ಸಿರಾಜುದ್ದೀನ್ ಹಿಮಮಿ ಸಖಾಫಿ, ಸದರ್ ಇರ್ಫಾನ್ ಮದನಿ, ಅಧ್ಯಕ್ಷ ಮಹಮ್ಮದ್ ಕುತ್ತಾರ್, ಉಪಾಧ್ಯಕ್ಷ ಝೈನುದ್ದೀನ್, ಕಾರ್ಯದರ್ಶಿ ಎಸ್.ಬಿ.ಮುಸ್ತಫಾ, ಕೋಶಾಧಿಕಾರಿ ಅಶ್ರಫ್, ಅಬ್ದುಲ್ ಕರೀಮ್ ಹಳೆಕೋಟೆ, ಅಬ್ದುಲ್ ಹಮೀದ್ ಹಳೆಕೋಟೆ, ಯು.ಎಚ್.ಅಲ್ತಾಫ್ ಹಳೆಕೋಟೆ, ರಿಯಾಝ್, ಮಹಮ್ಮದ್ ಮದನಿ, ನವಾಝ್ ಸಖಾಫಿ, ಅಶ್ರಫ್ ಇಂಜಿನಿಯರ್, ಶಾಫಿ ಮುಳಿಗುಡ್ಡೆ, ಜಮಾಲ್, ಇಸ್ಮಾಯಿಲ್ ಹಾಜಬ್ಬ, ಇಲ್ಯಾಸ್ ಹಾಜಬ್ಬ, ಅರೆಬಿಕ್ ಕಾಲೇಜು ಪ್ರೊಫೆಸರ್ ಇಬ್ರಾಹಿಂ ಅಹ್ಸನಿ, ನೂಮಾನ್ ನೂರಾನಿ, ಹಾಫಿಲ್ ಸಿನಾನ್ ಮದನಿ, ನಜೀಬ್ ನೂರಾನಿ, ತಸ್ಲೀಂ ನೂರಾನಿ, ಹಾಫಿಲ್ ಜಮಾಲ್ ನೂರಾನಿ, ಮುಫತ್ತಿಸ್ ಉಸ್ಮಾನ್ ಹುಸೈನ್ ಸಅದಿ, ಅಬ್ದುಲ್ ರಹ್ಮಾನ್, ಅತ್ತಾವುಲ್ಲಾ ಬಿ.ಸಿ.ರೋಡ್, ಅಬೂಬಕ್ಕರ್ ಉಪಸ್ಥಿತರಿದ್ದರು.

ದರ್ಗಾ ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net