

ಕಾಸರಗೋಡು: ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನ ಬ್ರಹ್ಮಕಲಶೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕಾಸರಗೋಡು ಮನ್ನಿಪಾಡಿಯ ಅಲಂಗೋಡು ಶ್ರೀ ಧೂಮಾವತಿ ನೃತ್ಯ ತಂಡದವರಿಂದ ‘ಫ್ಯೂಷನ್ ತಿರುವಾದಿರ’ ಕಾರ್ಯಕ್ರಮ ಜನಾಕರ್ಷಣೆಗೆ ಕಾರಣವಾಯಿತು.
ಓಮನ ರವಿ ಮನ್ನಿಪಾಡಿ, ಪೂರ್ಣಿಮಾ ರಾಜೇಶ್ ಮನ್ನಿಪಾಡಿ, ಅನುಶ್ರೀ, ಶೀಬಾ ಸತೀಶ ಕಾಂತಿಕೆರೆ, ಲತಾ ವಸಂತ ಕಾಂತಿಕೆರೆ, ವಿನಿತಾ ರಾವ್, ಅಶ್ವಿನಿ ಶರತ್, ಡಾ.ಚೈತ್ರಾ ರವಿ ಮನ್ನಿಪಾಡಿ, ಡಾ.ಮೃದುಲಾ ರಾವನ್ ಮನ್ನಿಪಾಡಿ, ಅಮಿತಾ ಶರತ್ ಮನ್ನಿಪಾಡಿ,ಧನಶ್ರೀ, ಫ್ಯೂಷನ್ ತಿರುವಾದಿರಕ್ಕೆ ಹೆಜ್ಜೆಹಾಕಿದರು. ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದ ಸ್ಕಂದ ಮಂಟಪದಲ್ಲಿ ರಂಗಭೂಮಿ ನಟ ಉದಯ ಕುಮಾರ್ ಮನ್ನಿಪಾಡಿ ಕಾರ್ಯಕ್ರಮ ನಿರ್ದೇಶಿಸಿದ್ದರು. ರವಿ ಮಣಿಯಾಣಿ, ಕುಞಿರಾಮ ಮಣಿಯಾಣಿ, ರಾವ ಮನ್ನಿಪಾಡಿ, ಜಯಕುಮಾರ್ ಮನ್ನಿಪಾಡಿ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಿತು.