ಭಾರತೀಯ ಸೇನೆ, ಸೈನಿಕರ ಸುರಕ್ಷತೆ ಸಂಕಲ್ಪ : ತಾಲೂಕಾದ್ಯಂತ ದೇವಳಗಳಲ್ಲಿ ವಿಶೇಷ ಪಾರ್ಥನೆ : ಆಪರೇಷನ್ ಸಿಂಧೂರ ಯಶಸ್ಸಿಗೆ ಸಂತಸ

kdb_may.11_4
Published on

ವಿಜಯವಾಣಿ ಸುದ್ದಿಜಾಲ ಕಡಬ

ಆಪರೇಷನ್ ಸಿಂಧೂರ ಕಾರ್ಯಾಚರಣೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಹಾಗೂ ಸೈನಿಕರ ಸುರಕ್ಷತೆಗಾಗಿ ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಮತ್ತು ಶ್ರೀ ಕೇಪುಳೇಶ್ವರ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಪ್ರಮುಖರಾದ ಜನೇಶ್ ಭಟ್, ರಾಘವೇಂದ್ರ ಭಟ್, ಜತ್ತಪ್ಪ ರೈ ಬರೆಪ್ಪಾಡಿ, ಲೋಕನಾಥ ವಜ್ರಗಿರಿ, ವಸಂತ ಕೆಲಂಬಿರಿ, ಐತ್ತಪ್ಪ ಗೌಡ ಕುವೆತ್ತೋಡಿ, ನಿರ್ಮಲಾ ಕೇಶವ ಅಮೈ, ಲೋಹಿತಾಕ್ಷ ಕೆಡೆಂಜಿಕಟ್ಟ, ಪ್ರವೀಣ್ ಕೆರೆನಾರು, ಗಿರಿಶಂಕರ ಸುಲಾಯ, ಕೃಷ್ಣ ಭಟ್ ಬರೆಪ್ಪಾಡಿ, ಹರ್ಷಿತ್ ಮುದ್ಯ, ಭಾಸ್ಕರ ಆಚಾರ್ಯ ಬರೆಪ್ಪಾಡಿ, ಲೋಕೇಶ್ ಬಿ.ಎನ್ ಬರೆಪ್ಪಾಡಿ, ಹೇಮಂತ್, ಅನಿಲ್ ಕೂಂಕ್ಯ

ಚಾರ್ವಾಕದಲ್ಲಿ ವಿಶೇಷ ಪ್ರಾರ್ಥನೆ: ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದಲ್ಲಿ ಅರ್ಚಕ ವೆಂಕಟಕೃಷ್ಣ ಭಟ್ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಧರ್ಮಪಾಲ ಗೌಡ ಕರಂದ್ಲಾಜೆ, ಸದಸ್ಯರಾದ ದಿನೇಶ್ ಗೌಡ ಇಡ್ಯಡ್ಕ, ಪದ್ಮನಾಭ ಗೌಡ ಪೊನ್ನೆತ್ತಡಿ, ಪುಷ್ಪರಾಜ್ ಕಲಾಯಿ ಹಾಗೂ ಭಕ್ತರು ಉಪಸ್ಥಿತರಿದ್ದರು.

ನೂಜಿಬೈಲ್‌ನಲ್ಲಿ ತಂಬಿಲ ಸೇವೆ: ರೆಂಜಿಲಾಡಿಯ ನೂಜಿಬೈಲ್ ನೂಜಿಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನದಲ್ಲಿ ಹಾಗೂ ಕ್ಷೇತ್ರದ ನಾಗಬನದಲ್ಲಿ ತಂಬಿಲ ಸೇವೆಗಳು, ವಿಶೇಷ ಪೂಜೆ, ಪ್ರಾರ್ಥನೆ, ಸಂಕಲ್ಪ ನೆರವೇರಿಸಿದವು. ಆಡಳಿತ ಸಮಿತಿ ಸದಸ್ಯರು, ಭಕ್ತರು ಉಪಸ್ಥಿತರಿದ್ದರು.

ಪಳ್ಳತ್ತಾರು ಮಸೀದಿಯಲ್ಲಿ ದುವಾ: ಬೆಳಂದೂರು ಗ್ರಾಮದ ಪಳ್ಳತ್ತಾರು ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಸೇನೆ, ಸೈನಿಕರ ಏಳಿಗೆಗಾಗಿ ವಿಶೇಷ ನಮಾಜ್ ನೆರವೇರಿತು. ಮಸೀದಿಯ ಇಮಾಮ್ ಶೆರೀಫ್ ಸಖಾಫಿ ಉಸ್ತಾದ್ ದುವಾಃ ನೆರವೇರಿಸಿ ಮಾತನಾಡಿದರು. ಜಮಾಅತಿನ ಪದಾಧಿಕಾರಿಗಳು, ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net