ಉತ್ತಮ ಆಹಾರ, ಗುಣಮಟ್ಟದಿಂದ ಉಡುಪಿಗೆ ಪ್ರಸಿದ್ಧಿ

kon
Published on

ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ

ಆಹಾರ ಉತ್ಪಾದನೆ, ಉತ್ತಮ ಗುಣಮಟ್ಟದಿಂದ ಉಡುಪಿ ವಿಶ್ವ ಪ್ರಸಿದ್ಧಿಯಾಗಿದೆ. ಇಲ್ಲಿನ ಪರಿಶುದ್ಧ ಹಾಗೂ ಗುಣಮಟ್ಟ ಬೇರೆ ಕಡೆ ಸಿಗಲು ಸಾಧ್ಯವಿಲ್ಲ. ಇಲ್ಲಿನ ಆಹಾರ ಉತ್ಪನ್ನಗಳಿಗೆ ದೇಶ, ವಿದೇಶಗಳಿಂದಲೂ ಬೇಡಿಕೆ ಇದೆ. ತಾವು ವಾಡುತ್ತಿರುವ ಉದ್ಯಮಕ್ಕೆ ನ್ಯಾಯ ಸಿಗಬೇಕು ಹಾಗೂ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಬಳಸಿಕೊಳ್ಳಬೇಕು ಎಂದು ಶಾಸಕ ಯಶ್‌ಪಾಲ್ ಎ.ಸುವರ್ಣ ಹೇಳಿದರು.

ಬ್ರಹ್ಮಾವರದಲ್ಲಿ ಭಾನುವಾರ ಉಡುಪಿ ಜಿಲ್ಲಾ ಬೇಕರಿ ಮತ್ತು ಖಾದ್ಯ ತಿನಿಸುಗಳ ತಯಾರಕರು ಹಾಗೂ ವಾರಾಟಗಾರರ ಸಂ ಮತ್ತು ಸಹಕಾರ ಸಂದ ವಾರ್ಷಿಕ ಮಹಾಸಭೆ, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಉಡುಪಿ ಮತ್ತು ದಕ್ಷಿಣ ಕನ್ನಡ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ವಿಭಾಗದ ಅಧಿಕಾರಿ ಡಾ.ಪ್ರವೀಣ್ ಕುವಾರ್ ವಾತನಾಡಿ, ತಯಾರಾಗುವ ಆಹಾರದಲ್ಲಿ ಉತ್ತಮ ಗುಣಮಟ್ಟ ಹೊಂದಿದ್ದು, ಉತ್ತಮ ಗುಣಮಟ್ಟ ನೀಡಿದ್ದಲ್ಲಿ ಗ್ರಾಹಕರು ಸಂತುಷ್ಟರಾಗುತ್ತಾರೆ ಎಂದರು.

ಸಂ ಅಧ್ಯಕ್ಷ ವಿಶ್ವನಾಥ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು.

ಸಭೆಯಲ್ಲಿ 600ಕ್ಕೂ ಅಧಿಕ ಉದ್ಯಮಿಗಳು ಭಾಗಿಯಾಗಿದ್ದರು. ವೆಂಕಟೇಶ್ ಅವರು ಸರ್ಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ ವಾಹಿತಿ ನೀಡಿದರು. ಸಂದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ, ದಾನಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಕಲ್ಕೂರು ರೆಫ್ರಿಜರೇಷನ್‌ನ ವ್ಯವಸ್ಥಾಪಕ ನಿರ್ದೇಶಕ ರಂಜನ್ ಕಲ್ಕೂರ, ಸಹಕಾರ ಸಂಗಳ ನಿವೃತ್ತ ಸಹಾಯಕ ನಿಬಂಧಕ ಅರುಣ ಕುವಾರ್ ಎಸ್.ವಿ., ಸಹಕಾರ ಸಂ ನಿರ್ದೇಶಕ ರಾಜ್‌ಮೋಹನ್ ನಾಯರಿ, ಸಂ ಪ್ರಧಾನ ಕಾರ್ಯದರ್ಶಿ ಸತ್ಯಪ್ರಸಾದ್ ಶೆಣೈ, ಕೋಶಾಧಿಕಾರಿ ಶಶಿಕಾಂತ್ ಜಿ.ನಾಯಕ್, ಸಂ ಸಲಹೆಗಾರ ಸ್ಟ್ಯಾನ್ಲಿ ಹೆರಾಲ್ಡ್ ಡಿ.ಸೋಜ, ಉಪಾಧ್ಯಕ್ಷರುಗಳಾದ ಸುದೇವ ಶೆಟ್ಟಿ, ಕೆ.ಪಿ.ಶ್ರೀಶಾನ್, ಜತೆ ಕಾರ್ಯದರ್ಶಿಗಳಾದ ಗಣಪತಿ ಮರಕಾಲ ಕೃಷ್ಣ ಪೂಜಾರಿ, ಪ್ರಮುಖರಾದ ಅಮೃತ್ ಕುವಾರ್ ತೌಳ, ದುರ್ಗಾಪ್ರಸಾದ್, ಸಂದೀಪ್, ಚಂದ್ರಶೇಖರ್, ಕೃಷ್ಣ ನಾಯ್ಕ, ವಿಶ್ವನಾಥ ಜಿ., ಶಶಿಧರ ಗಾಣಿಗ, ರಿತೇಶ್ ಸುವರ್ಣ, ಹಸನಬ್ಬ, ಅಜಿತ್ ಶೆಟ್ಟಿ, ರಾವೇಂದ್ರ ಮಡಿಕುಳ, ಸಂತೋಷ್ ಕುಲಾಲ್, ವಿಶ್ವನಾಥ್ ಬಿ.ಎಸ್., ಸೋಮಶೇಖರ ಕೆ.ಎಸ್., ಸಂತೋಷ ಪೂಜಾರಿ, ಕೆ.ಮಂಜುನಾಥ ಕಾಮತ್, ನವೀನ್ ಶೆಟ್ಟಿ, ಸಂಪತ್, ಭವ್ಯಾ ಪೈ, ಶೀನಿವಾಸ ಖಾರ್ವಿ, ಅರುಣ ವಸಂತ ನಾಯಕ್ ಮತ್ತು ವಸಂತ ನಾಯಕ್ ವಡ್ಜೆ, ಉದಯ್ ಕುವಾರ್, ನಿರ್ದೇಶಕಿ ಸುಷ್ಮಾ ಕುಲಾಲ್, ಸಹಕಾರ ಸಂ ಸದಸ್ಯರು, ಸಿಬ್ಬಂದಿ ವರ್ಗಉಪಸ್ಥಿತರಿದ್ದರು.

ಪ್ರಾರ್ಥನಾ ಮತ್ತು ಪ್ರಥ್ವಿ ಪ್ರಾರ್ಥಿಸಿದರು. ಸಂಪತ್ ವರದಿ ವಾಚಿಸಿದರು. ಸಂದ ಅಧ್ಯಕ್ಷ ಶ್ರೀಧರ್ ಪಿ.ಎಸ್.ಪ್ರಸ್ತಾವಿಸಿದರು. ಸಂ ಸದಸ್ಯ ಕೀರ್ತಿ ಕುವಾರ್ ಸನ್ಮಾನಿತರ ಪಟ್ಟಿ ವಾಚಿಸಿದರು. ಪ್ರಧಾನ ಕಾರ್ಯದರ್ಶಿ ಸತ್ಯಪ್ರಸಾದ್ ಶೆಣೈ ಸ್ವಾಗತಿಸಿ, ನಿರ್ದೇಶಕಿ ಪ್ರೀತಿ ಶೆಣೈ ಮತ್ತು ಹರೀಶ್ ಕುವಾರ್ ವಂದಿಸಿದರು. ರಾವೇಂದ್ರ ಬಸ್ರೂರು ಮತ್ತು ವಿಶ್ವನಾಥ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net