

ವಿಜಯವಾಣಿ ಸುದ್ದಿಜಾಲ ಬೈಂದೂರು
ಭಜನೆ ಎಂಬ ಮೂರಕ್ಷರಕ್ಕೆ ಬಹಳ ಮಹತ್ವವಿದ್ದು, ನಮ್ಮಿಂದ ಮನಃಪೂರ್ವಕವಾಗಿ ದೇವರಿಗೆ ನೀಡುವಂತಹ ಒಂದು ಭಾವನಾತ್ಮಕ ಸಂಪತ್ತು. ಭಜನೆಯನ್ನು ಭಕ್ತಿಪೂರ್ವಕವಾಗಿ ಅರ್ಪಿಸಿದರೆ ಭಗವಂತನಿಗೆ ಅದಕ್ಕಿಂತ ದೊಡ್ಡ ಹರಕೆಯಿಲ್ಲ ಎಂದು ತಾಲೂಕು ಭಜನಾ ಪರಿಷತ್ ಗೌರವಾಧ್ಯಕ್ಷ ರುರಾಮ ಕೆ.ಪೂಜಾರಿ ಹೇಳಿದರು.
ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನದಲ್ಲಿ ಭಾನುವಾರ ತಾಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾವಾಭಿವದ್ಧಿ ಯೋಜನೆ ಬಿ.ಸಿ. ಟ್ರಸ್ಟ್, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತು ವತಿಯಿಂದ ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ ನಡೆದ ಹಿರಿಯ ಭಜನಾ ಹಾಡುಗಾರರಿಗೆ ಗೌರವಾರ್ಪಣೆ, ಹಾಗೂ ಭಜನೋತ್ಸವ ಕಾರ್ಯಕ್ರಮದಲ್ಲಿ ವಾತನಾಡಿದರು.
ಭಜನಾ ಪರಿಷತ್ ರಾಜ್ಯ ಉಪಾಧ್ಯಕ್ಷ ರಾಜೇಂದ್ರ ಕುವಾರ್ ಅವರು ಹಿರಿಯ ಭಜನಾ ಹಾಡುಗಾರರಿಗೆ ಗೌರವಾರ್ಪಣೆ ಸಮರ್ಪಿಸಿದರು.
ದೇವಸ್ಥಾನದ ಪ್ರಧಾನ ಅರ್ಚಕ ಬಿ.ಕೃಷ್ಣಮೂರ್ತಿ ನಾವಡ, ತಾಲೂಕು ಕೇಂದ್ರ ಸಮಿತಿ ಅಧ್ಯಕ್ಷ ವಾಸು ಮೇಸ್ತ, ಯೋಜನಾಧಿಕಾರಿ ಸಂಜಯ್ ನಾಯ್ಕ, ಜಿಲ್ಲಾ ಜನಜಾಗೃತಿ ಸಮಿತಿ ಸದಸ್ಯ ರಾಮ ಮೇಸ್ತ, ತಾಲೂಕು ಜನಜಾಗೃತಿ ಸಮಿತಿ ಅಧ್ಯಕ್ಷ ಸುಧಾಕರ ಆಚಾರ್ಯ ಇದ್ದರು.
ಸುರೇಖಾ ಪೂಜಾರಿ ಸ್ವಾಗತಿಸಿ, ಕೃಷ್ಣ ಮರಾಠಿ ವಂದಿಸಿದರು. ಭಜನಾ ಪರಿಷತ್ ತಾಲೂಕು ಅಧ್ಯಕ್ಷ ಕೃಷ್ಣ ಪೂಜಾರಿ ಪ್ರಾಸ್ತಾವಿಸಿದರು. ಕಾರ್ಯದರ್ಶಿ ಮಂಜುನಾಥ ಉಳ್ಳೂರು ವರದಿ ಮಂಡಿಸಿದರು. ರಾಜು ಜೋಗಿ ನಿರೂಪಿಸಿದರು.