

ಹೆಬ್ರಿ: ಭಾರತದ ಆರ್ಥಿಕತೆಯಲ್ಲಿ ಸಹಕಾರಿಗಳು ಮಹತ್ತರ ಪಾತ್ರ ವಹಿಸುತ್ತಿದೆ. ಕೃಷಿ, ಕೈಗಾರಿಕಾ, ಉತ್ಪಾದನೆ, ಬ್ಯಾಂಕಿಂಗ್, ಹೈನುಗಾರಿಕೆ, ಮೀನುಗಾರಿಕೆ, ಸೇವಾ ಕ್ಷೇತ್ರ ಸೇರಿದಂತೆ ಎಲ್ಲ ಕ್ಷೇತ್ರದಲ್ಲಿ ಸಹಕಾರಿಗಳು ವಿಶಿಷ್ಟ ರೀತಿಯಲ್ಲಿ ಕೊಡುಗೆ ನೀಡುತ್ತಿದೆ. ಆದರೆ ಈ ಸಹಕಾರಿ ಕ್ಷೇತ್ರ ತನ್ನ ಪಾವಿತ್ರತೆ ಕಳೆದುಕೊಳ್ಳುತ್ತಿದೆ. ಇದಕ್ಕೆ ಕಾರಣವಾಗಿರುವ ಭ್ರಷ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕುಡಿಬೈಲ್ ಕುಚ್ಚೂರು ಶಾಂತಿನಿಕೇತನ ಸೌಹಾರ್ದ ಸಹಕಾರಿ ಸಂ ಅಧ್ಯಕ್ಷ ರಾಜೇಶ್ ಪತ್ರಿಕಾ ಹೇಳಿಕೆಯಲ್ಲಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಕೆಲವೊಂದು ಸಹಕಾರಿಗಳ ಆಡಳಿತ ಮಂಡಳಿ ಸದಸ್ಯರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಅದರೊಂದಿಗೆ ಅಧಿಕಾರಿಗಳು ಸಹ ಇದನ್ನು ಹಾಳುಗೆಡುತ್ತಿದ್ದಾರೆ.
ಸಹಕಾರ ಕ್ಷೇತ್ರದಲ್ಲಿ ಮಹಿಳೆಯರು, ಯುವ ಜನರು ಆಸಕ್ತಿಯಿಂದ ತೊಡಗಿಕೊಳ್ಳುವಲ್ಲಿ ಇದು ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಸಹಕಾರಿ ಕ್ಷೇತ್ರದಲ್ಲಿ ಪಾರದರ್ಶಕತೆ ಹೆಚ್ಚಾಗಿ ಜನಸಾವಾನ್ಯರ ಅಭಿವೃದ್ಧಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದರು.
ಸಹಕಾರಿ ಕ್ಷೇತ್ರದ ಮೂಲಕ ಜನಸಾವಾನ್ಯರಿಗೆ ಉತ್ತಮ ಸೇವೆ ಸಲ್ಲಿಸುವ ಉದ್ದೇಶದಿಂದ ನಮ್ಮ ತಂಡ ಕಾರ್ಯನಿರ್ವಹಿಸುತ್ತಿದೆ. ಆದರೆ ಇಂತಯ ಭ್ರಷ್ಟ ವ್ಯವಸ್ಥೆ ನಮಗೆ ಅಪಾರ ನೋವು ಮತ್ತು ಬೇಸರ ಉಂಟು ವಾಡಿದ್ದು ಅದನ್ನು ತಡಯುವ ಪ್ರಯತ್ನ ವಾಡಿದ್ದೇವೆ ಎಂದು ಅಧ್ಯಕ್ಷ ರಾಜೇಶ್ ತಿಳಿಸಿದರು.