ಸೈನಿಕರ ತ್ಯಾಗದಿಂದ ಜನರಿಗೆ ನೆಮ್ಮದಿ ಜೀವನ

byn (4)
Published on

ವಿಜಯವಾಣಿ ಸುದ್ದಿಜಾಲ ಬೈಂದೂರು ಸ್ವಾರ್ಥದ ಜೀವನ ನಡೆಸುವವರು ದೇವರು, ವೈದ್ಯ ಹಾಗೂ ಸೈನಿಕರನ್ನು ಮರೆಯುತ್ತಾರೆ. ನಾವೆಲ್ಲರು ನೆಮ್ಮದಿಯ ಜೀವನ ನಡೆಸುವುದಕ್ಕೆ ಗಡಿಯಲ್ಲಿ ದೇಶ ಕಾಯುವ ಯೋಧರ ತ್ಯಾಗವೇ ಪ್ರಮುಖ ಕಾರಣ ಎಂದು ನಿವೃತ ಸೈನಿಕ ಅನಂತಕೃಷ್ಣ ಎಂ.ಎಂ ಹೇಳಿದರು. ಸಿದ್ದಾಪುರ ಜ್ಞಾನ ಸರಸ್ವತಿ ಪದವಿಪೂರ್ವ ಕಾಲೇಜಿಲ್ಲಿ ಶನಿವಾರ ನಡೆದ ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜ್ಞಾನ ಸರಸ್ವತಿ ಪದವಿಪೂರ್ವ ಕಾಲೇಜು ಸ್ಥಾಪಕ ಬಿ.ಎಸ್.ಸುರೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಾಯುಸೇನೆಯಲ್ಲಿ ಕರ್ತವ್ಯ ನಿರ್ವಹಿಸಿದ ಮಾಜಿ ಸೈನಿಕ ಅನಂತಕೃಷ್ಣ ಎಂ.ಎಂ., ಡಿಆರ್‌ಡಿಒ ಸಹಿತ ವಿವಿಧ ರಾಷ್ಟ್ರರಕ್ಷಣಾ ಯೋಜನೆಗಳಲ್ಲಿ ಸೇವೆ ಸಲ್ಲಿಸಿರುವ ಯೋಧ ಸುರೇಶ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಕಾಲೇಜು ಸ್ಥಾಪಕ ಯು.ಪಾಂಡುರಂಗ ಪಡಿಯಾರ್, ಪ್ರಾಂಶುಪಾಲ ಅಮರೇಶ್ ಹೆಗ್ಡೆ, ಉಪಪ್ರಾಂಶುಪಾಲ ಹರ್ಷ ಶೆಟ್ಟಿ ಸರಸ್ವತಿ ವಿದ್ಯಾಲಯದ ಮುಖ್ಯಶಿಕ್ಷಕಿ ಶ್ವೇತಾ ಉಪಸ್ಥಿತರಿದ್ದರು. ಹರ್ಷ ಶೆಟ್ಟಿ ವಂದಿಸಿದರು. ಉಪನ್ಯಾಸಕ ನಾಗರಾಜ ಗುಳ್ಳಾಡಿ ನಿರೂಪಿಸಿದರು.

ಜಗತ್ತಿನಲ್ಲಿ ರಾಷ್ಟ್ರವನ್ನು ತಾಯಿ ಎಂದು ಪೂಜಿಸುವ ಏಕೈಕ ದೇಶ ಭಾರತ. ಸೈನಿಕರು ಕ್ಷಣಕ್ಷಣಕ್ಕೂ ಜಾಗೃತರಾಗಿ ದೇಶ ಉಳಿವಿಗಾಗಿ ಹೋರಾಟ ನಡೆಸಿದರೆ ಮಾತ್ರ ದೇಶವಾಸಿಗಳು ನಿಶ್ಚಿಂತೆಯಿಂದ ಜೀವನ ಸಾಗಿಸಲು ಸಾಧ್ಯ. ಇತ್ತೀಚೆಗೆ ದೇಶದಲ್ಲಿ ಸಂಸ್ಕೃತಿ ಹಾಳಾಗುತ್ತಿದೆ. ಮಕ್ಕಳಿಗೆ ಎಳವೆಯಲ್ಲಿಯೇ ಸಂಸ್ಕೃತಿ, ಸಂಸ್ಕಾರ ಅರಿವು ಮೂಡಿಸುವ ಕೆಲಸವಾಗಬೇಕು. ಸುರೇಶ ಶೆಟ್ಟಿ ನಿವೃತ್ತ ಯೋಧ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net