ಮೈಸೂರಿನಲ್ಲಿ ಜೋಡಿ ಕೊಲೆ​, ಮತ್ತೊಬ್ಬನ ಸ್ಥಿತಿ ಚಿಂತಾಜನಕ! ಬೆಚ್ಚಿಬಿದ್ಧ ಸ್ಥಳೀಯರು

murder case
Published on

ಮೈಸೂರು: ಎಲೆ ತೋಟದ ಬಳಿ ಭಾನುವಾರ ತಡರಾತ್ರಿ ಜೋಡಿ ಕೊಲೆಯಾಗಿದ್ದು, ಮತ್ತೊಬ್ಬನ ಮೇಲೂ ಮಾರಣಾಂತಿಕ ಹಲ್ಲೆ ನಡೆದಿದೆ.

ಮೈಸೂರಿನ ಗೌರಿಶಂಕರ ನಗರದ ನಿವಾಸಿಗಳಾದ ಕಿರಣ್ (29) ಮತ್ತು ಕಿಶನ್ (29) ಬರ್ಬರವಾಗಿ ಕೊಲೆಯಾದವರು. ಈ ಘಟನೆಯಲ್ಲಿ ಮಧು ಎಂಬಾತ ಗಂಭೀರವಾಗಿ ಗಾಯಗೊಂಡಿದ್ದು, ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿರಿ ಅಡಕೆ ರೂಪದಲ್ಲಿ ಮನೆಗೆ ಬಂದ ಜವರಾಯ 1 ವರ್ಷದ ಮಗುವಿನ ಪ್ರಾಣ ಹೊತ್ತೊಯ್ದ!

ಆಸ್ತಿ ವಿಚಾರ ಮತ್ತು ಹಳೇ ದ್ವೇಷದ ಹಿನ್ನೆಲೆ ಕಿರಣ್​, ಕಿಶನ್​, ಮಧು ಎಂಬಾತನನ್ನು ಸ್ನೇಹಿತರರ ಮತ್ತೊಂದು ತಂಡವೇ ಕೊಲೆ ಮಾಡಲು ಮಚ್ಚಿನಿಂದ ಮನಸೋ ಇಚ್ಛೆ ಹಲ್ಲೆ ನಡೆಸಿದೆ ಎನ್ನಲಾಗಿದೆ. ಈ ಪೈಕಿ ಮಧು ಪ್ರಾಣಪಾಯದಿಂದ ಪಾರಾಗಿದ್ದು, ಕಿರಣ್​ ಮತ್ತು ಕಿಶನ್​ ಮೃತಪಟ್ಟಿದ್ದಾರೆ. ರಕ್ತಸಿಕ್ತವಾಗಿ ಬಿದ್ದಿದ್ದ ಮೃತದೇಹಗಳನ್ನ ಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ಮಧು, ಕಿರಣ್​, ಕಿಶನ್​
ಮಧು, ಕಿರಣ್​, ಕಿಶನ್​

ಘಟನಾ ಸ್ಥಳಕ್ಕೆ ಡಿಸಿಪಿ ಡಾ.ಎ.ಎನ್. ಪ್ರಕಾಶ್ ಗೌಡ, ಎಸಿಪಿ ಪೂರ್ಣಚಂದ್ರ, ಕೆ.ಆರ್. ಪೊಲೀಸ್ ಠಾಣೆ ಇನ್​​ಸ್ಪೆಕ್ಟರ್, ಶ್ವಾನದಳ, ಬೆರಳಚ್ಚು ತಂಡ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಘಟನೆ ಸಂಬಂಧ ಮಾತನಾಡಿರುವ ಗಾಯಾಳು ಮಧು, ನಾನು ಮತ್ತು ಕಿರಣ್​, ಕಿಶನ್​ ಮೂವರು ಚಿಕನ್​ ಮಾಡಿಕೊಂಡು ಎಲೆ ತೋಟದ ಬಳಿ ಎಣ್ಣೆ ಪಾರ್ಸ​ಲ್​ ತೆಗೆದುಕೊಂಡು ಹೋಗಿ ಕುಡಿಯುತ್ತಿದ್ದೆವು. ಅಲ್ಲಿಗೆ ಬಂದ ಮೀಸೆ ಸ್ವಾಮಿ ಎಂಬಾತನ ಮೈದುನ ಮಾರಣಾಂತಿಕ ಹಲ್ಲೆ ಮಾಡಿದ್ದು, ಇಬ್ಬರನ್ನು ಕೊಂದ. ಜಾಗದ ವಿಚಾರವಾಗಿ ಕಿರಣ್​ ಹಾಗೂ ಸ್ವಾಮಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎಂದು ಹೇಳಿದ್ದಾನೆ ಎಂದು ತಿಳಿದುಬಂದಿದೆ. ಕೃಷ್ಣ ರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net