VIDEO| ಚಲಿಸುತ್ತಿದ್ದ ಕಾರಿನಲ್ಲಿ ಯುವಕರ ಹುಚ್ಚಾಟ! ಈ ದೃಶ್ಯ ನೋಡಿದ್ರೆ ಸಿಟ್ಟು ನೆತ್ತಿಗೇರೋದು ಗ್ಯಾರಂಟಿ

car drive case
Published on

ವಿಜಯಪುರ: ಸಾಮಾಜಿಕ ಹೊಣೆಗಾರಿಕೆಯೊಂದಿಗೆ ಹೆಜ್ಜೆ ಇಡಬೇಕಿದ್ದ ಯುವಕರೇ ಚಲಿಸುತ್ತಿದ್ದ ಕಾರಿನಲ್ಲಿ ಪುಂಡಾಟ ಮೆರೆದಿದ್ದು, ಈ ದೃಶ್ಯ ಬೆಚ್ಚಿಬೀಳಿಸುವಂತಿದೆ.

ಕಾರನ್ನು ವೇಗವಾಗಿ ಚಲಾಯಿಸುತ್ತಲೇ ಡ್ರೈವರ್ ಸೀಟ್ ಅನ್ನು ಅದಲು-ಬದಲು ಮಾಡಿ ಹುಚ್ಚು ಸಾಹಸ ಮರೆದಿರುವ ಯುವಕರು ಸಾರ್ವಜನಕರ ಟೀಕೆಗೆ ಗುರಿಯಾಗಿದ್ದಾರೆ. ವಿಜಯಪುರ ಯುವಕರ ಈ ಡೇಂಜರೆಸ್ ಡ್ರೈವಿಂಗ್​ನ ವಿಡಿಯೋ ವೈರಲ್ ಆಗಿದ್ದು, ಸಂಚಾರ ನಿಯಮ ಉಲ್ಲಂಘಿಸಿ ಪ್ರಾಣಕ್ಕೆ ತೊಂದರೆ ಆಗಿದ್ದರೆ ಯಾರು ಹೊಣೆ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.

ಕಾರಲ್ಲಿ ಪ್ರವಾಸ ಹೊರಟ ವೇಳೆ ಯುವಕರು ಹುಚ್ಚಾಟ ಮೆರೆದಿದ್ದಾರೆ. ಸ್ವಲ್ಪ ಹೆಚ್ಚು ಕಡಿಮೆಯಾಗಿದ್ರೂ ಯುವಕರ ಪ್ರಾಣಕ್ಕೆ ಅಪಾಯ ಆಗುವ ಸಂಭವವಿತ್ತು. ಈ ದೃಶ್ಯವನ್ನ ಅಮನ್ ರಾಠೋಡ ಎಂಬ ಯುವಕ ಫೇಸ್​ಬುಕ್​ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾನೆ.

ವಿಜಯಪುರ ನಗರದ ವಿನಯ ಹುಲಸಗುಂದ ಹಾಗೂ ಮನೋಜ್ ಬಿರಾದಾರ ಎಂಬವರು ಕಾರು ಚಲಿಸುತ್ತಿರುವಾಗಲೇ ಡ್ರೈವರ್​ ಸೀಟನನ್ನು ಅದಲು‌-ಬದಲು ಮಾಡಿಕೊಂಡಿದ್ದಾರೆ. ಅಂದಹಾಗೆ ವಿನಯ ಎಂಬಾತ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರ‌ ಪುತ್ರ ಎನ್ನಲಾಗಿದೆ.

ಡೇಂಜರಸ್​ ಡ್ರೈವಿಂಗ್​ ದೃಶ್ಯ ವೀಕ್ಷಿಸಲು ಕೆಳಗಿನ ಲಿಂಕ್​ ಅನ್ನು ಕ್ಲಿಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net