ನಿಂತಿದ್ದ ಕ್ರೂಸರ್​ಗೆ ಟೆಂಪೋ ಡಿಕ್ಕಿ; ಪ್ರತಿಭಟನೆಗೆ ಬರುತ್ತಿದ್ದ ಇಬ್ಬರು ಸಾವು

Cruiser Accident
Published on

ತುಮಕೂರು: ರಸ್ತೆಬದಿ ನಿಂತಿದ್ದ ಕ್ರೂಸರ್​ಗೆ ಟೆಂಪೋ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತುಮಕೂರು ಹೊರವಲಯದ ರಾಷ್ಟ್ರೀಯ ಹೆದ್ದಾರಿ 4ರ ಕೋರ ಬಳಿ ನಡೆದಿದೆ.

ಮೃತರನ್ನು ಗಂಗಾವತಿ ಮೂಲಕ ಕ್ರೂಸರ್​ ಚಾಲಕ ಶಂಕರ್ (35) ಹಾಗೂ ಪಡಿತರ ವಿತರಣಾ ಕೇಂದ್ರದ ಮಾಲೀಕ ಸತೀಶ್​ (40) ಎಂದು ಗುರುತಿಸಲಾಗಿದೆ.

ಪಡಿತರ ವಿತರಣಾ ಕೇಂದ್ರದ ಮಾಲೀಕರು ಬೆಂಗಳೂರು ನಗರದ ಫ್ರೀಡಂ ಪಾರ್ಕಿನಲ್ಲಿ ಹಮ್ಮಿಕೊಂಡಿದಗ್ದ ಪ್ರತಿಭಟನೆಯಲ್ಲಿ ಭಾಗಿಯಾಗಲು ಕ್ರೂಸರ್​ನಲ್ಲಿ ತೆರಳುತ್ತಿದ್ದರು. ತುಮಕೂರಿನ ಕೋರ ಬಳಿ ಕ್ರೂಸರ್​ ಬಳಿ ಪಂಕ್ಚರ್​ ಆಗಿದೆ. ರಸ್ತೆ ಬದಿಯಲ್ಲಿ ಟೈಯರ್​ ಬದಲಿಸುತ್ತಿದ್ದ ವೇಳೆ ಹಿಂಬದಿಯಿಂದ ಟೆಂಪೋ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ವಿಚಾರ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಕೋರ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮೃತದೇಹಗಳನ್ನು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net