More

    ಮತ್ತೊಮ್ಮೆ ವಿರಾಟ್​ ಕೊಹ್ಲಿಯನ್ನು ಸ್ವಾರ್ಥಿ ಎಂದ ಪಾಕ್​ ಮಾಜಿ ಕ್ರಿಕೆಟಿಗ; ನೆಟ್ಟಿಗರಿಂದ ತೀವ್ರ ತರಾಟೆ

    ನವದೆಹಲಿ: ದಕ್ಷಿಣ ಆಫ್ರಿಕಾದ ವಿರುದ್ಧದ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಕ್ರಿಕೆಟ್​ ದಿಗ್ಗಜನ ದಾಖಲೆ ಸರಿಗಟ್ಟಿದ್ದ ಟೀಂ ಇಂಡಿಯಾದ ಸ್ಟಾರ್​ ಬ್ಯಾಟ್ಸ್​ಮನ್ ವಿರಾಟ್​ ಕೊಹ್ಲಿ ಅವರನ್ನು ಟೀಕಿಸಿ ಮಾತನಾಡಿದ, ಪಾಕ್​ ಮಾಜಿ ನಾಯಕ ಮೊಹಮ್ಮದ್​ ಹಫೀಜ್​ ಈಗ ಮತ್ತೆ ಸುದ್ದಿಯಲ್ಲಿದ್ದಾರೆ.

    ಬುಧವಾರ ನೆದರ್ಲೆಂಡ್​ ವಿರುದ್ಧ ನಡೆದ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಇಂಗ್ಲೆಂಡ್​ನ ಬೆನ್​ ಸ್ಟೋಕ್ಸ್​ ಶತಕದ ಮೂಲಕ ತಂಡದ ರನ್​ ಗಳಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಕುರಿತು ಮಾತನಾಡಿರುವ ಮೊಹಮ್ಮದ್​ ಹಫೀಜ್​ ಬೆನ್​ ಸ್ಟೋಕ್ಸ್​ ಕೊಹ್ಲಿ ತರ ಸ್ವಾರ್ಥ ಆಟವಾಡಲಿಲ್ಲ ಎಂದು ಹೇಳುವ ಮೂಲಕ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.

    ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿರುವ ಹಫೀಜ್​ ಒತ್ತಡದ ನಡುವೆಯೂ ಸ್ಪೋಟಕ ಆಟವಾಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಬೆನ್​ ಸ್ಟೋಕ್ಸ್​ ಅವರ ಆಟ ಸ್ವಾರ್ಥ ಮತ್ತು ನಿಸ್ವಾರ್ಥ ವಿಧಾನವನ್ನು ಪ್ರತ್ಯೇಕಿಸಲು ಸಂಪೂರ್ಣ ಉದಾಹರಣೆಯಾಗಿದೆ ಎಂದು ಕೊಹ್ಲಿ ಹೆಸರೇಳದೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

    ಇದನ್ನೂ ಓದಿ: ದೆಹಲಿ ವಾಯುಮಾಲಿನ್ಯ ತಡೆ; ಮೋಡ ಬಿತ್ತನೆಗೆ ಮುಂದಾದ ಕೇಜ್ರಿವಾಲ್​ ಸರ್ಕಾರ

    ಹಫೀಜ್​ ಟ್ವೀಟ್​ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಇಂಗ್ಲೆಂಡ್​ ಕ್ರಿಕೆಟ್​ ತಂಡದ ಮಾಜಿ ನಾಯಕ ಮೈಕೆಲ್​ ವಾನ್, ಹಫೀಜ್​ ಅವರು ಕೊಹ್ಲಿ ಮೇಲಿನ ಹಳೇ ದ್ವೇಷದ ಈಗ ಮಾತನಾಡುತ್ತಿದ್ದಾರೆ ಎಂದು ಕಾಲೆಳೆದಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪ್ರತಿಕ್ರಿಯಿಸಿರುವ ವಾಗನ್, ಟಿ20 ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿಯ ಬೌಲಿಂಗ್‌ಗೆ ಬಲಿಯಾದ 8 ಮಂದಿಯಲ್ಲಿ ಮೊಹಮ್ಮದ್ ಹಫೀಜ್ ಕೂಡ ಒಬ್ಬರು. ಆ ಕಾರಣಕ್ಕಾಗಿ ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ತಿರುಗೇಟು ನೀಡಿದ್ದಾರೆ.

    ಇತ್ತ ಮೊಹಮ್ಮದ್​ ಹಫೀಜ್​ ಟ್ವೀಟ್​ಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು, ಕೊಹ್ಲಿಯಿಂದ ಔಟ್​ ಆದ ಕಾರಣಕ್ಕೆ ನೀವು ಈ ರೀತಿ ವಾಗ್ದಾಳಿ ನಡೆಸುವುದು ಸರಿಯಲ್ಲ. ಯಾವುದೋ ಹಳೇ ವಿಚಾರವನ್ನು ಕೆದಕಿಕೊಂಡು ಕೂತಿರುವ ನಿಮಗೆ ಮಾಡಲು ಬೇರೇನು ಕೆಲಸವಿಲ್ಲ ಎಂದು ಹಫಿಜ್​ ವಿರುದ್ಧ ಕ್ರೀಡಾಭಿಮಾನಿಗಳು ಕಿಡಿಕಾರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts