More

    ಪಾಕಿಸ್ತಾನದಿಂದ ಅಪ್ರಚೋದಿತ ಗುಂಡಿನ ದಾಳಿ; BSF​ ಯೋಧ ಹುತಾತ್ಮ

    ಶ್ರೀನಗರ: ಭಾರತದ ಗಡಿಯಲ್ಲಿ ಪಾಕಿಸ್ತಾನ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಗಡಿ ಭದ್ರತಾ ಪಡೆ (BSF)ನ ಯೋಧರೊಬ್ಬರು ಹುತಾತ್ಮರಾಗಿರುವ ಘಟನೆ ಜಮ್ಮು-ಕಾಶ್ಮೀರದ ಸಾಂಬಾ ಜಿಲ್ಲೆಯ ರಾಮಗಢ ಸೆಕ್ಟರ್​ನಲ್ಲಿ ನಡೆದಿದೆ.

    ಗಡಿ ಬಳಿ ಇರುವ ಚೆಕ್​ ಪೋಸ್ಟ್​ಗಳನ್ನು ಗುರಿಯಾಗಿಸಿ ಪಾಕಿಸ್ತಾನ ದಾಳಿ ನಡೆಸಿದ್ದು, 24 ದಿನಗಳ ಅಂತರದಲ್ಲಿ ಇದು ಮೂರನೇ ದಾಳಿಯಾಗಿದೆ. ಗಾಯಗೊಂಡಿದ್ದ ಯೋಧನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

    ಇದನ್ನೂ ಓದಿ: ಖಲಾಸೀ ಹಾಡಿಗೆ ಮಸ್ತ್​ ಸ್ಟೆಪ್ಸ್​ ಹಾಕಿದ ವೃದ್ದೆ; ವಿಡಿಯೋ ವೈರಲ್

    ಈ ಕುರಿತು ಪ್ರಕಟಣೆ ಒಂದನ್ನು ಹೊರಡಿಸಿರುವ ಬಿಎಸ್​ಎಫ್​, ಮಧ್ಯರಾತ್ರಿ 12:20ರ ಸುಮಾರಿಗೆ ಪಾಕಿಸ್ತಾನ ರೇಂಜರ್ಸ್​ ಕಡೆಯಿಂದ ಗುಂಡು ಹಾಗೂ ಶೆಲ್​ ದಾಳಿ ಪ್ರಾರಂಭವಾಯಿತು. ಪಾಕಿಸ್ತಾನದ ಈ ಅಪ್ರಚೋದಿತ ದಾಳಿಗೆ ಬಿಎಸ್​ಎಫ್​ ಯೋಧರು ತಕ್ಕ ಪ್ರತ್ಯುತ್ತರ ನೀಡಿದ್ದಾರೆ. ಗುಂಡು ಹಾಗೂ ಶೆಲ್​ ದಾಳಿಯಿಂದಾಗಿ ಗಡಿ ಅಂಚಿನಲ್ಲಿರುವ ಗ್ರಾಮದ ಜನರಲ್ಲಿ ಆತಂಕ ಸೃಷ್ಟಿಯಾಗಿದೆ ಎಂದು ತಿಳಿಸಿದೆ.

    ಅಕ್ಟೋಬರ್​ 17 ಹಾಗೂ 28ರಂದು ಭಾರತೀಯ ಸೇನೆಯನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಮೂವರು ಬಿಎಸ್​ಎಫ್​ ಯೋಧರು ಹಾಗೂ ಓರ್ವ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts