ಅವಳ ವಿಚಾರದಲ್ಲಿ ಕಾಲೇಜ್​ಮೇಟ್ಸ್ ನಡುವೆ ಕಿರಿಕ್​; ಹಾಡಹಗಲೇ ನಡೆದುಹೋಯಿತು ಕೊಲೆ!

Likhith
Published on

ಬೆಂಗಳೂರು: ಯುವತಿಯೊಬ್ಬಳ ವಿಚಾರದಲ್ಲಿ ಕಿತ್ತಾಡಿಕೊಂಡ ಕಾಲೇಜು ಸಹಪಾಠಿಗಳಿಬ್ಬರು, ಕೊನೆಗೆ ಒಬ್ಬನನ್ನು ಇನ್ನೊಬ್ಬ ಕೊಲೆ ಮಾಡುವ ಮಟ್ಟಿಗೆ ಹೋಗಿದೆ. ರಾಜಧಾನಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಹಾಡಹಗಲೇ ಕೊಲೆಯೊಂದು ನಡೆದು ಹೋಗಿದೆ.

ಬೆಂಗಳೂರಿನ ಲಾಲ್​ ಬಹದ್ದೂರ್​ ಶಾಸ್ತ್ರಿ ನಗರದಲ್ಲಿ ಈ ಕೊಲೆ ನಡೆದಿದೆ. ಲಿಖಿತ್ ಎಂಬಾತ ಕೊಲೆಯಾದವ. ನಯೀದ್ ಹಾಗೂ ಲಿಖಿತ್ ಎಂಬಿಬ್ಬರು ಕಾಲೇಜು ಸಹಪಾಠಿಗಳಾಗಿದ್ದು, ಯುವತಿಯೊಬ್ಬಳ ವಿಚಾರವಾಗಿ ವೈಮನಸ್ಸು ಹೊಂದಿದ್ದರು.

ಆ ಯುವತಿಯ ವಿಚಾರವಾಗಿ ಮಾತನಾಡಲು ಲಿಖಿತ್ ತನ್ನ ಸಹಪಾಠಿ ನಯೀದ್​ನನ್ನು ಬರಲು ಹೇಳಿದ್ದ. ಈ ಸಂದರ್ಭದಲ್ಲಿ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ಹೋಗಿತ್ತು. ಈ ಸಂದರ್ಭದಲ್ಲಿ ಲಿಖಿತ್ ಡ್ಯಾಗರ್​ನಿಂದ ನಯೀದ್​ಗೆ ಇರಿಯಲು ಮುಂದಾಗಿದ್ದು, ಆಗ ಆ ಡ್ಯಾಗರ್ ಕಿತ್ತುಕೊಂಡ ನಯೀದ್​ ಲಿಖಿತ್​ಗೆ ಚುಚ್ಚಿದ್ದರಿಂದ ಆತ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾನೆ ಎನ್ನಲಾಗಿದೆ. ಸ್ಥಳಕ್ಕೆ ಎಚ್​ಎಎಲ್ ಪೊಲೀಸರು ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net