ಬಾವಿಗೆ ಬಿದ್ದು ಮಕ್ಕಳಿಬ್ಬರ ದುರಂತ ಸಾವು; ಸಾವಿಗೀಡಾದವರು ಅಕ್ಕ-ತಮ್ಮ..

Well
ಬಾವಿಯಿಂದ ಮಕ್ಕಳನ್ನು ಮೇಲೆತ್ತುತ್ತಿರುವ ದೃಶ್ಯ
Published on

ಕಲಬುರಗಿ: ಗದಗ ಜಿಲ್ಲೆಯ ಮುಂಡರಗಿಯಲ್ಲಿ ಗೂಡ್ಸ್ ಲಾರಿಗೆ ಐದು ವರ್ಷದ ಮಗು ಬಲಿಯಾದ ಸುದ್ದಿಯ ಬೆನ್ನಿಗೇ ರಾಜ್ಯದಲ್ಲಿ ಮತ್ತೊಂದು ಆಘಾತಕಾರಿ ಸುದ್ದಿ ಹೊರಹೊಮ್ಮಿದೆ. ಒಂದೇ ಮನೆಯ ಮಕ್ಕಳಿಬ್ಬರು ಬಾವಿಗೆ ಬಿದ್ದ ಬಲಿಯಾಗಿದ್ದಾರೆ.

ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಗೊಬ್ಬರವಾಡಿ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಪ್ರಣತಿ (6) ಹಾಗೂ ಶಿವಕುಮಾರ್​ (4) ಎಂಬಿಬ್ಬರು ಸಾವಿಗೀಡಾದ ಮಕ್ಕಳು.
ಇವರು ಗೊಬ್ಬರವಾಡಿ ನಿವಾಸಿ ಶರಣಪ್ಪ ರಟಕಲ್ ಅವರ ಮಕ್ಕಳು.

ಈ ಅಕ್ಕ-ತಮ್ಮ ಇಬ್ಬರೂ ಬಾವಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದು, ಘಟನೆ ಹೇಗೆ ಸಂಭವಿಸಿತು ಎಂಬುದು ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ. ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net