KEA ಪರೀಕ್ಷಾ ಅಕ್ರಮ; ಆರ್​.ಡಿ. ಪಾಟೀಲ್​ಗೆ ಆಶ್ರಯ ನೀಡಿದ್ದ ಮನೆ ಮಾಲೀಕ ಸೇರಿದಂತೆ ಇಬ್ಬರು ಅರೆಸ್ಟ್​

RD Patil FLat owner
Published on

ಕಲಬುರಗಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ವಿವಿಧ ನಿಗಮ ಮಂಡಳಿಗಳ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆಸಿದ ಕಿಂಗ್​ಪಿನ್​ ಆರ್.ಡಿ.ಪಾಟೀಲ್​ಗೆ ಮನೆ ಬಾಡಿಗೆ ನೀಡಿದ ಆರೋಪದ ಮೇಲೆ ಅಪಾರ್ಟ್​ಮೆಂಟ್​ ಮಾಲೀಕ ಸೇರಿದಂತೆ ತನಿಖಾ ತಂಡ ಇಬ್ಬರನ್ನು ವಶಕ್ಕೆ ಪಡೆದಿದೆ.

KEA ಪರೀಕ್ಷಾ ಅಕ್ರಮದ ಪ್ರಮುಖ ಆರೋಪಿ ಆರ್​.ಡಿ. ಪಾಟೀಲ್​ ಹಿನ್ನಲೆ ವಿಚಾರಿಸದೆ ಮನೆ ಬಾಡಿಗೆ ನೀಡಿದ ಆರೋಪದ ಮೇಲೆ ಅಪಾರ್ಟ್​​ಮೆಂಟ್​ ಮಾಲೀಕ ಶಂಕರಗೌಡ ರಾಮಚಂದ್ರ ಯಾಳವಾರ ಸೂಪರ್​ವೈಸರ್​-ಸೆಕ್ಯೂರಿಟಿ ಇನ್​ಚಾರ್ಜ್​ ಆಗಿದ್ದ ದಿಲೀಪ್​ ಪವಾರ ಎಂಬಾತನನ್ನು ಅಫಜಲ್​ಪುರ ಪೊಲೀಸರು ಬಂಧಿಸಿದ್ದಾರೆ.

RD Patil Escape

KEA ಪರೀಕ್ಷೆಯಲ್ಲಿನ ಅಕ್ರಮಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಆರ್​.ಡಿ. ಪಾಟೀಲ್​ ಬಗ್ಗೆ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದ್ದರೂ ಪೊಲೀಸರಿಗೆ ಮಾಹಿತಿ ನೀಡದೆ ಆರೋಪಿಗಳಿಗೆ ಮನೆ ಬಾಡಿಗೆಗ ಕೊಟ್ಟು ತಲೆಮಾರಿಸಿಕೊಳ್ಳಲು ಸಹಕರಿಸಿದ ಆರೋಪದ ಮೇಲೆ ಅಪಾರ್ಟ್​ಮೆಂಟ್​ ಮಾಲೀಕ ಹಾಗೂ ಸೂಪರ್​ವೈಸರ್​-ಸೆಕ್ಯೂರಿಟಿ ಇನ್​ಚಾರ್ಜ್​ನನ್ನು ತನಿಖಾ ತಂಡ ವಶಕ್ಕೆ ಪಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿ ಆರ್​.ಡಿ. ಪಾಟೀಲ್​ ನೆರೆಯ ಮಹಾರಾಷ್ಟ್ರ, ತೆಲಂಗಾಣ ಹಾಗು ಆಂಧ್ರಪ್ರದೇಶದಲ್ಲಿ ತಲೆಮಾರಿಸಿಕೊಂಡಿರುವ ಬಗ್ಗೆ ಪೊಲೀಸರಿಗೆ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net