ಈ ದಿನದಂದು ರಿಲೀಸ್​ ಆಗಲಿದೆ ಸಲಾರ್​ ಟ್ರೇಲರ್; ಹೊರಬಿತ್ತು ಮೇಜರ್​ ಅಪ್​ಡೇಟ್

prabhas
Published on

ಬೆಂಗಳೂರು: ಯಂಗ್​ ರೆಬೆಲ್​​ ಸ್ಟಾರ್​ ಪ್ರಭಾಸ್ ಅಭಿನಯದ, ಪ್ರಶಾಂತ್​ ನೀಲ್​ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ಸಲಾರ್​ ಸಿನಿಮಾದ ಹೊಸ ಅಪ್ಡೇಟ್​ ಒಂದು ಹೊರಬಿದ್ದಿದ್ದು, ಡಾರ್ಲಿಂಗ್ ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

ಈ ಹಿಂದೆ ಸಿನಿಮಾದ ಟ್ರೇಲರ್​ ಡಿಸೆಂಬರ್​ 1ಕ್ಕೆ ರಿಲೀಸ್​ ಆಗಲಿದೆ ಎಂದು ಹೇಳಲಾಗಿತ್ತು. ಆದರೆ, ಈ ಬಗ್ಗೆ ಅಧಿಕೃತ ಘೋಷಣೆಯಾಗಿರಲಿಲ್ಲ. ಈ ಮಧ್ಯೆ ಸಿನಿಮಾದ ರಿಲೀಸ್ ದಿನಾಂಕ ಮುಂದಕ್ಕೆ ಹೋಗಲಿದೆ ಎಂದೆಲ್ಲ ಹೇಳಲಾಗುತ್ತಿತ್ತು. ಆದರೆ, ಹಾಗಾಗುತ್ತಿಲ್ಲ. ಡಿಸೆಂಬರ್ 1ರಂದು ಸಲಾರ್ ಟ್ರೇಲರ್ ರಿಲೀಸ್ ಆಗಲಿದ್ದು, ಡಿಸೆಂಬರ್ 22ಕ್ಕೆ ಸಿನಿಮಾ ವಿಶ್ವಾದ್ಯಂತ ತೆರೆಕಾಣಲಿದೆ.

ಮೊದಲಿನಿಂದಲೂ ಕೆಜಿಎಫ್​-2 ಹಾಗೂ ಸಲಾರ್​ಗೆ ಕನೆಕ್ಷನ್​ ಇದೇ ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಸಲಾರ್​ ಟ್ರೇಲರ್​ನಲ್ಲಿ ಈ ಬಗ್ಗೆ ಮಾಹಿತಿ ದೊರೆಯಲಿದೆ ಎಂದು ಹೇಳಲಾಗಿದೆ. ರಾಕಿಂಗ್​ ಸ್ಟಾರ್​ ಯಶ್​ ಸಹ ಚಿತ್ರದಲ್ಲಿ ಅತಿಥಿ ಪಾತ್ರ ನಿರ್ವಹಿಸಿದ್ದಾರೆ ಎಂದು ಹೇಳಲಾಗಿದೆ. ಒಂದು ವೇಳೆ ಇದು ನಿಜವಾಗಿದ್ದಲ್ಲಿ ಸಿನಿರಸಿಕರ ನಿರೀಕ್ಷೆ ಮತ್ತಷ್ಟು ಗರಿಗೆದರಲಿದೆ.

ಐದು ಭಾಷೆಯಲ್ಲಿ ಒಂದೇ ಟ್ರೇಲರ್ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ. ಡೈಲಾಗ್​ ಇಲ್ಲದೆ ಕೇವಲ ಬಿಜಿಎಂ ಮೂಲಕ ದೃಶ್ಯಗಳನ್ನು ತೋರಿಸಬಹುದು ಅಥವಾ ಇಂಗ್ಲಿಷ್ ಡೈಲಾಗ್ ಮೂಲಕ ಟ್ರೇಲರ್​ನ ಪ್ರಸ್ತುತಪಡಿಸಬಹುದು ಎಂದು ಹೇಳಲಾಗುತ್ತಿದೆ. ಐದು ಭಾಷೆಗಳಲ್ಲಿ ಒಂದೇ ಟ್ರೇಲರ್ ರಿಲೀಸ್ ಆದರೆ ಯೂಟ್ಯೂಬ್​ನಲ್ಲಿ ಹಲವು ದಾಖಲೆ ನಿರ್ಮಾಣ ಆಗಬಹುದು ಎಂಬ ಲೆಕ್ಕಾಚಾರದಲ್ಲಿದೆ.

ಸಲಾರ್ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿದೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರದಲ್ಲಿ ಪ್ರಭಾಸ್, ಶ್ರುತಿ ಹಾಸನ್, ಪೃಥ್ವಿರಾಜ್​ ಸುಕುಮಾರನ್ ಮೊದಲಾದವರು ನಟಿಸಿದ್ದಾರೆ. ಕೆಜಿಎಫ್ 2 ಚಿತ್ರದಲ್ಲಿ ಕೆಲಸ ಮಾಡಿದ ಬಹುತೇಕ ತಂತ್ರಜ್ಞರು ಇಲ್ಲಿಯೂ ಕೆಲಸ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net