More

    ಜೈಲಿನಿಂದ 80 ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಿದ ಪಾಕಿಸ್ತಾನ

    ವದೆಹಲಿ: ಅಕ್ರಮವಾಗಿ ಜಲಗಡಿ ಪ್ರವೇಶಿಸಿದ ಆರೋಪದ ಮೇಲೆ ಪಾಕಿಸ್ತಾನದ ವಶದಲ್ಲಿದ್ದ 80 ಭಾರತದ ಮೀನುಗಾರರನ್ನು ಅಲ್ಲಿನ ಸರ್ಕಾರ ಗುರುವಾರ (ನವೆಂಬರ್ 09)ರಂದು ಕರಾಚಿಯ ಮಲಿರ್​ ಜೈಲಿನಿಂದ ಬಿಡುಗಡೆ ಮಾಡಿದೆ.

    ಅಕ್ರಮ ವಿದೇಶಿ ವಲಸಿಗರು ಮತ್ತು ಪ್ರಜೆಗಳನ್ನು ದೇಶದಿಂದ ಹೊರಹಾಕಲು ಪಾಕಿಸ್ತಾನ ಸರ್ಕಾರವು ನಡೆಸುತ್ತಿರುವ ಅಭಿಯಾನದಜ ಅಡಿಯಲ್ಲಿ ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಲಾಗಿದೆ.

    ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು, ಭಾರತೀಯ ಮೀನುಗಾರರನ್ನು ಅಲ್ಲಮ ಇಕ್ಬಾಲ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಭಾರೀ ಭದ್ರತೆಯೊಂದಿಗೆ ಕಳುಹಿಸಲಾಗುತ್ತಿದ್ದು, ಅವರು ನಾಳೆ ಲಾಹೋರ್ ತಲುಪಲಿದ್ದಾರೆ. ಅಲ್ಲಿಂದ ವಾಘಾ ಗಡಿಯಲ್ಲಿ ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಗುವುದು ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಇದನ್ನೂ ಓದಿ: ರಾಜ್ಯೋತ್ಸವ ರಸಪ್ರಶ್ನೆ – 9: ಫಲಿತಾಂಶ

    ಈ ಕುರಿತು ಮಾತನಾಡಿರುವ ಈಧಿ ವೆಲ್ಫೇರ್ ಟ್ರಸ್ಟ್‌ನ ಮುಖ್ಯಸ್ಥ ಫೈಸಲ್ ಈಧಿ, ಬಹುತೇಕ ಬಡವರಾಗಿರುವ ಭಾರತೀಯ ಮೀನುಗಾರರು ಅಂತಿಮವಾಗಿ ತಮ್ಮ ಮನೆಗೆ ಮರಳುತ್ತಿರುವುದು ಸಂತೋಷದ ವಿಚಾರ.ಭಾರತೀಯ ಮೀನುಗಾರರು ಶೀಘ್ರದಲ್ಲೇ ತಮ್ಮ ಕುಟುಂಬಗಳನ್ನು ಸೇರಿಕೊಳ್ಳಲಿದ್ದಾರೆ. ನಾವು ಅವರಿಗೆ ಮನೆಗೆ ತೆಗೆದುಕೊಂಡು ಹೋಗಲು ಹಣ ಮತ್ತು ಇತರ ಉಡುಗೊರೆಗಳನ್ನು ನೀಡಿದ್ದೇವೆ ಎಂದು ತಿಳಿಸಿದ್ದಾರೆ.

    ಅಕ್ರಮವಾಗಿ ಜಲಗಡಿ ಪ್ರವೇಶಿಸಿದ ಆರೋಪದ ಮೇಲೆ ಪಾಕಿಸ್ತಾನ ಮತ್ತು ಭಾರತ ಪರಸ್ಪರರ ಮೀನುಗಾರರನ್ನು ನಿಯಮಿತವಾಗಿ ಬಂಧಿಸುತ್ತಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts