More

    ಉಚ್ಚಾಟನೆಗೆ ಶಿಫಾರಸ್ಸು; ಮುಂದಿನ ಬಾರಿ ದೊಡ್ಡ ಜನಾದೇಶದೊಂದಿಗೆ ಲೋಕಸಭೆಗೆ ಗೆದ್ದು ಬರುವೆ: ಸಂಸದೆ ಮಹುವಾ ಮೊಯಿತ್ರಾ

    ನವದೆಹಲಿ: ಸಂಸತ್​ ಅಧಿವೇಶನದಲ್ಲಿ ಪ್ರಶ್ನೆಗಳನ್ನು ಕೇಳಲು ಲಂಚ ಪಡೆದಿರುವ ಆರೋಪಕ್ಕೆ ಸಂಬಂಧಿಸಿದಂತೆ ನೈತಿಕ ಸಮಿತಿ ಉಚ್ಚಾಟನೆಗೆ ಶಿಫಾರಸ್ಸು ಮಾಡಿರುವ ಕುರಿತು ಪ್ರತಿಕ್ರಿಯಿಸಿರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಮುಂದಿನ ಚುನವಾಣೆಯಲ್ಲಿ ದೊಡ್ಡ ಜನಾದೇಶದೊಂದಿಗೆ ಗೆದ್ದು ಮತ್ತೊಮ್ಮೆ ಆಯ್ಕೆಯಾಗುತ್ತೇನೆ ಎಂದು ಹೇಳಿದ್ದಾರೆ.

    ನೈತಿಕ ಸಮಿತಿಯು 6:4 ಮತಗಳಲ್ಲಿ ಅಂಗೀಕರಿಸಿದ 500 ಪುಟಗಳ ವರದಿಗೆ ಪ್ರತಿಕ್ರಿಯಿಸಿದ ಮಹುವಾ ಮೊಯಿತ್ರಾ ಇದೊಂದು ಪೂರ್ವ ನಿಗದಿತ ಪಂದ್ಯ ಎಂದು ಆರೋಪಿಸಿದ್ದಾರೆ.

    ಲೋಕಸಭೆಗೆ ಮತ್ತೆ ಬರುವೆ

    ಈ ಕುರಿತು ಪ್ರತಿಕ್ರಿಯಿಸಿರುವ ಸಂಸದೆ ಮಹುವಾ ಮೊಯಿತ್ರಾ, ಈ ವಿಚಾರವನ್ನು ಚರ್ಚೆಗೆ ಅವರು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ತೆಗೆದುಕೊಳ್ಳಲಿ. ನೈತಿಕ ಸಮಿತಿ ಉಚ್ಚಾಟನೆ ಮಾಡಲು ಶಿಫಾರಸ್ಸು ಮಾಡಿದ್ದು, ಇನ್ನೂ ಏನೂ ಆಗಿಲ್ಲ. ನನಗೆ ಖುಷಿಯಾಗುತ್ತಿರುವ ವಿಚಾರ ಏನೆಂದರೆ ಸಂಸದೀಯ ಪ್ರಜಾಪ್ರಭುತ್ವದ ಅಣಕವನ್ನು ಬಿಜೆಪಿಯವರು ಇಡೀ ದೇಶಕ್ಕೆ ತೋರಿಸಿರುವುದು ಎಂದು ಕಿಡಿಕಾರಿದ್ದಾರೆ.

    ತಮ್ಮ ವರದಿಯನ್ನು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಸಲ್ಲಿಸುವುದಾಗಿ ನೈತಿಕ ಸಮಿತಿ ಅಧ್ಯಕ್ಷ ವಿನೋದ್ ಸೋಂಕರ್ ಹೇಳಿದ್ದಾರೆ. ವರದಿಯನ್ನು ಪ್ರಕಟಿಸಲು ಸ್ಪೀಕರ್ ಆದೇಶಿಸಬಹುದು. ಸಂಸತ್ತಿನ ಮುಂದಿನ ಅಧಿವೇಶನದಲ್ಲಿ, ಸಮಿತಿಯ ಅಧ್ಯಕ್ಷರು ಸದನದಲ್ಲಿ ವರದಿಯನ್ನು ಮಂಡಿಸುತ್ತಾರೆ ಮತ್ತು ನಂತರ ಅದರ ಮೇಲೆ ಚರ್ಚೆ ನಡೆಯಲಿದೆ. ಆನಂತರ ಸದಸ್ಯರ ಉಚ್ಚಾಟನೆಯ ಸರ್ಕಾರದ ನಿರ್ಣಯದ ಮೇಲೆ ಮತ ಚಲಾಯಿಸಲಾಗುವುದು. ಆಗ ಮಾತ್ರ ಮಹುವಾ ಮೊಯಿತ್ರಾ ಅವರ ಉಚ್ಚಾಟನೆ ಪರಿಣಾಮಕಾರಿಯಾಗಿರುತ್ತದೆ.

    ಇದನ್ನೂ ಓದಿ: VIDEO| ರೈಲಿನ ಹಳಿ ಮೇಲೆ ಪಟಾಕಿ ಸಿಡಿಸಿದ ಭೂಪ; ವೈರಲ್ ಆಗುವ ಭರದಲ್ಲಿ ಪೇಚಿಗೆ ಸಿಲುಕಿದ

    ಅಸಮ್ಮತಿ ಸೂಚಿಸಿದ ವಿಪಕ್ಷ ನಾಯಕರು

    ಉದ್ಯಮಿ ಗೌತಮ್​ ಅದಾನಿ ಕುರಿತು ಸಂಸತ್​ ಅಧಿವೇಶನದ ವೇಲೆ ಪ್ರಶ್ನೆಗಳನ್ನು ಕೇಳಿ ಕಲಾಪಕ್ಕೆ ಅಡ್ಡಿಪಡಿಸಲು ಲಂಚ ಸ್ವೀಕರಿಸಿದ್ದಾರೆ ಎಂದು ಬಿಜೆಪಿ ಸಂಸದ ನಿಶಿಕಾಂತ್​ ದುಬೆ ಆರೋಪಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಲೋಕಸಭೆ ನೈತಿಕ ಸಮಿತಿ ದೂರು ದಾಖಲಿಸಿಕೊಂಡು ತನಿಖೆ ನಡೆಸಿತ್ತು. ಉದ್ಯಮಿ ದರ್ಶನ್​, ಸಂಸದೆ ಮಹುವಾ ಮೊಯಿತ್ರಾ, ಬಿಜೆಪಿ ಸಂಸದ ನಿಶಿಕಾಂತ್ ದುಬೆ ಮತ್ತು ವಕೀಲ ಜೈ ಅನಂತ್ ದೆಹದ್ರಾಯಿ ಅವರ ಹೇಳಿಕೆಗಳನ್ನು ದಾಖಲಿಸಿತು.

    ಮಹುವಾ ಮೊಯಿತ್ರಾ ಅವರು ಸಂಸತ್ತಿನಲ್ಲಿ ಎತ್ತಿದ್ದ ಗೌತಮ್ ಅದಾನಿ ವಿರುದ್ಧ ಪ್ರಶ್ನೆಗಳನ್ನು ಪೋಸ್ಟ್ ಮಾಡಿದ್ದನ್ನು ಉದ್ಯಮಿ ದರ್ಶನ್ ಹಿರಾನಂದಾನಿ ಒಪ್ಪಿಕೊಂಡಿದ್ದಾರೆ. ಆದಾಗ್ಯೂ ಹಿರಾನಂದಾನಿ ಅವರೊಂದಿಗೆ ಸಂಸತ್ತಿನ ಲಾಗಿನ್ ಅನ್ನು ಹಂಚಿಕೊಂಡಿರುವ ಬಗ್ಗೆ ಮಹುವಾ ಕೂಡಾ ಒಪ್ಪಿಕೊಂಡಿದ್ದಾರೆ. ಈ ರೀತಿ ಮಾಡಿದ್ದಕ್ಕಾಗಿ ಮಹುವಾ ಅವರನ್ನು ಲೋಕಸಭೆಯಿಂದ ಹೊರಹಾಕುವಂತೆ ನೈತಿಕ ಸಮಿತಿ ಶಿಫಾರಸು ಮಾಡಿದೆ. ಮಹುವಾ ಮೊಯಿತ್ರಾ ಇಲ್ಲದಿದ್ದಾಗ ದುಬೈನಿಂದ 47 ಬಾರಿ ಲಾಗಿನ್‌ಗಳನ್ನು ಬಳಸಲಾಗಿದೆ ಎಂದು ವರದಿಗಳು ತಿಳಿಸಿವೆ.

    ನವೆಂಬರ್ 2 ರಂದು ಮಹುವಾ ಮೊಯಿತ್ರಾ ಅವರನ್ನು ವಿಚಾರಣೆಗೊಳಪಡಿಸಲಾಯಿತು, ಅಲ್ಲಿ ಅಸಭ್ಯ ಮತ್ತು ವೈಯಕ್ತಿಕ ಪ್ರಶ್ನೆಗಳನ್ನು ಕೇಳಿದ್ದರಿಂದ ಕಿರುಕುಳವನ್ನು ಎದುರಿಸಿದ್ದೇನೆ ಎಂದು ಮಹುವಾ ಹೇಳಿಕೊಂಡಿದ್ದಾರೆ. ಗುರುವಾರ ಸಮಿತಿಯ ನಾಲ್ವರು ವಿರೋಧ ಪಕ್ಷದ ಸದಸ್ಯರು ಕರಡು ವರದಿಯನ್ನು ವಿರೋಧಿಸಿದ್ದು ಅದರ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಹೇಳಿದ್ದಾರೆ. ದರ್ಶನ್ ಹಿರಾನಂದನಿಗೆ ಸಮನ್ಸ್ ನೀಡಿಲ್ಲ ಎಂದು ವರದಿಗೆ ಅಸಮ್ಮತಿ ಸೂಚಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts