ನಿರುದ್ಯೋಗಿ ಯುವಕರನ್ನೇ ಟಾರ್ಗೆಟ್​ ಮಾಡ್ತಿದ್ದ ನಯವಂಚಕಿ ಸೆರೆ..!

Fraud Woman
Published on

ತುಮಕೂರು: ಡಿಸಿ, ಎಡಿಸಿ, ಎಸಿ ಬಳಿ ಪರ್ಸನಲ್‌ ಸೆಕ್ರೆಟರಿ ಕೆಲಸ ಕೊಡಿಸುತ್ತೇನೆಂದು ನಾಲ್ವರಿಗೆ ಪಂಗನಾಮ ಹಾಕಿದ್ದ ವಂಚಕಿಯನ್ನು ಪೊಲೀಸರು ಬಂಧಿಸಿದ್ದಾರೆ !

ಸೌಮ್ಯ ಅಲಿಯಾಸ್ ಲಾವಣ್ಯಗೌಡ (33) ಬಂಧಿತ ವಂಚಕಿ. ಬೆಂಗಳೂರಿನ ಕಡಬಗೆರೆ ಬಳಿಯ ಜನಪ್ರಿಯಲೇಔಟ್ ನಿವಾಸಿ ಲಾವಣ್ಯಗೌಡ, ನಿರುದ್ಯೋಗಿ ಯುವಕರಿಗೆ ಜಿಲ್ಲಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ ಮತ್ತು ಉಪವಿಭಾಗಾಧಿಕಾರಿ ಅವರ ಕಚೇರಿಯಲ್ಲಿ ಕೆಲಸ ಕೊಡಿಸುತ್ತೇವೆ ಎಂದು ಲಾವಣ್ಯ ಗೌಡ, ಗೂಗಲ್ ಪೇ, ಫೋನ್ ಪೇ ಮೂಲಕ 4.5 ಲಕ್ಷ ರೂ., ಹಣ ಹಾಗೂ ಮೂಲ ಅಂಕಪಟ್ಟಿಗಳನ್ನು ಪಡೆದುಕೊಂಡಿದ್ದಳು.

ರಶ್ಮಿ, ರಾಜೇಶ್, ತಿಮ್ಮರಾಜು ಹಾಗೂ ಸಂದೀಪ್ ಕುಮಾರ್​ಗೆ ಉದ್ಯೋಗ ಕೊಡಿಸುವುದಾಗಿ ಲಾವಣ್ಯಗೌಡ ಹಣ ಪಡೆದಿದ್ದಳು. ಅಧಿಕಾರಿಗಳ ಹೆಸರು ಹೇಳಿ ವಂಚಿಸಿದ ಪ್ರಕರಣ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿ ಕೆ.ರಾಕೇಶ್ ಕುಮಾರ್ ಗಾಬರಿಗೊಂಡು ತಕ್ಷಣವೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಂಶಿಕೃಷ್ಣ ಅವರಿಗೆ ಈ ಬಗ್ಗೆ ಮಾಹಿತಿ ನೀಡಿ ಪ್ರಕರಣವನ್ನು ಪತ್ತೆಹಚ್ಚುವಂತೆ ತಿಳಿಸಿದ್ದರು.

ಹಣ ಕಳೆದುಕೊಂಡ ರಾಜೇಶ್ ನೀಡಿದ ದೂರಿನ ಮೇರೆಗೆ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಲಾವಣ್ಯಗೌಡಳನ್ನು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net