ಬಾತ್​ರೂಮ್​ಗೆ ಹೋದ ಯುವತಿ ತುಂಬಾ ಹೊತ್ತು ಹಿಂದಿರುಗಲೇ ಇಲ್ಲ: ಬಾಗಿಲು ಮುರಿದವರಿಗೆ ಕಾದಿತ್ತು ಶಾಕ್​!

Girl
Published on

ಚೆವೆಲ್ಲಾ: ಪ್ರಿಯಕರನನ್ನು ಮದುವೆಯಾಗಲು ಪಾಲಕರು ನಿರಾಕರಿಸಿದ್ದಕ್ಕೆ ಮನನೊಂದ ಯುವತಿಯೊಬ್ಬಳು ಪ್ರೇಮಿಗಳ ದಿನದಂದೇ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣದ ಚೆವೆಲ್ಲಾ ಪಟ್ಟಣದ ಶಂಕರಪಲ್ಲಿ ಪೊಲೀಸ್​ ಠಾಣೆ ವ್ಯಾಪ್ತಿಯ ಮೊಕಿಲತಾಂಡದಲ್ಲಿ ನಡೆದಿದೆ.

ಮೃತಳನ್ನು ಅನುಷಾ (19) ಎಂದು ಗುರುತಿಸಲಾಗಿದೆ. 10ನೇ ತರಗತಿವರೆಗೆ ಓದಿದ್ದ ಅನುಷಾ ಇತ್ತೀಚೆಗೆ ನರ್ಸಿಂಗ್​ ಅಧ್ಯಯನಕ್ಕೆಂದು ಬೆಂಗಳೂರಿಗೆ ಬಂದಿದ್ದಳು. ಇದೇ ತಿಂಗಳ 5ರಂದು ಮನೆಗೆ ಬರಬೇಕಾದವಳು ಬಂದಿರಲಿಲ್ಲ. ಪಾಲಕರು ಸಾಕಷ್ಟು ಬಾರಿ ಕರೆ ಮಾಡಿದರು ಯಾವುದೇ ಉತ್ತರ ನೀಡಿರಲಿಲ್ಲ. ಗಾಬರಿಗೊಂಡ ಪಾಲಕರು ಜೂನ್​ 6ರಂದು ಠಾಣೆಗೆ ತೆರಳಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.

ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆಗೆ ಇಳಿದು ಪೊಲೀಸರಿಗೆ ಅನುಷಾ ಸುಳಿವು ಪತ್ತೆಯಾಗಿತ್ತು. ಕಳೆದ ಶನಿವಾರ (ಫೆ.13) ಆಕೆಯನ್ನು ಕರೆತಂದು ಸಮಾಲೋಚನೆ ನಡೆಸಿ ಮನೆಗೆ ಕಳುಹಿಸಲಾಗಿತ್ತು. ಶನಿವಾರ ಸಂಜೆ ಪಾಲಕರ ಜತೆಯಲ್ಲಿ ಮನೆಗೆ ಅನುಷಾ, ಯುವಕನನ್ನು ಪ್ರೀತಿಸುತ್ತಿರುವುದಾಗಿ ಮತ್ತು ಮದುವೆ ಅಂತ ಆಗುವುದಾರೆ ಆತನ ಜತೆಯಲ್ಲೇ ಎಂದು ಹಠ ಹಿಡಿದಿದ್ದಳು. ಆದರೆ, ಪಾಲಕರು ಇದನ್ನು ನಿರಾಕರಿಸಿದ್ದರು.

ಭಾನುವಾರ ಬೆಳಗ್ಗೆ ಬಾತ್​ರೂಮ್​ಗೆ ತೆರಳಿದ ಅನುಷಾ, ದುಪ್ಪಟ್ಟದಲ್ಲಿ ನೇಣು ಬಿಗಿದುಕೊಂಡು ಅಲ್ಲಿಯೇ ಮೃತಪಟ್ಟಿದ್ದಾಳೆ. ಸ್ನಾನ ಮಾಡುವುದಾಗಿ ಸುಳ್ಳು ಹೇಳಿ ಹೋದ ಅನುಷಾ ಅಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅನೇಕ ಸಮಯದವರೆಗೆ ಅನುಷಾ, ಬಾತ್​ರೂಮ್​ನಿಂದ ಹೊರಗೆ ಬಾರದಿದ್ದನ್ನು ಗಮನಿಸಿದ ಪಾಲಕರು ಬಾತ್​ರೂಮ್​ ಬಾಗಿಲು ಮುರಿದಿದ್ದಾರೆ. ಆದರೆ, ಅನುಷಾ ನೇಣಿನ ಕುಣಿಕೆಯಲ್ಲಿ ನೇತಾಡುತ್ತಿರುವ ದೃಶ್ಯ ಪಾಲಕರನ್ನು ಆಘಾತಕ್ಕೆ ದೂಡಿತು. ಹೆಗಲೆತ್ತರಕ್ಕೆ ಬೆಳೆದಿದ್ದ ಮಗಳನ್ನು ಕಳೆದುಕೊಂಡ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿತ್ತು.

ಪಾಲಕರು ನೀಡಿದ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net